ETV Bharat / state

ಕೊಪ್ಪಳದಲ್ಲಿ ಬಿಡಾಡಿ ದನಗಳ ದಾಳಿಗೆ ಮಹಿಳೆ ಬಲಿ: ನಗರಸಭೆ ಮುಂಭಾಗ ಶವ ಇಟ್ಟು ಪ್ರತಿಭಟನೆ - ಈಟಿವಿ ಭಾರತ ಕನ್ನಡ

ಬಿಡಾಡಿ ದನಗಳ ದಾಳಿಗೆ ಮಹಿಳೆ ಮೃತಪಟ್ಟಿದ್ದು, ಮಹಿಳೆ ಶವವನ್ನು ಕೊಪ್ಪಳ ನಗರಸಭೆ ಮುಂಭಾಗದಲ್ಲಿಟ್ಟು, ವಾರ್ಡ್​ನ ನಾಗರಿಕರು ಪ್ರತಿಭಟನೆ ನಡೆಸಿದರು.

Etv woman-died-of-stray-cattle-attack-protest-in-front-of-municipality-koppala
ಬಿಡಾಡಿ ದನಗಳ ದಾಳಿಗೆ ಮಹಿಳೆ ಬಲಿ : ನಗರಸಭೆ ಮುಂಭಾಗ ಶವ ಇಟ್ಟು ಪ್ರತಿಭಟನೆ
author img

By

Published : Nov 21, 2022, 3:13 PM IST

ಕೊಪ್ಪಳ: ಬಿಡಾದಿ ದನಗಳ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟಿದ್ದು, ಮಹಿಳೆಯ ಶವವನ್ನು ನಗರಸಭೆಯ ಮುಂಭಾಗ ಇಟ್ಟು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.

ಭಾನುವಾರ ಸಂಜೆ ನಗರದ 30 ನೇ ವಾಡ್೯‌ನ ದೇವರಾಜ್ ಕಾಲೋನಿ ನಿವಾಸಿ ರಮೀಜಾ ಬೇಗಂ (44) ಎಂಬವರು ಬಹಿರ್ದೆಸೆಗೆ ತೆರಳಿದ್ದರು. ಈ ಸಂದರ್ಭ ಬಿಡಾಡಿ ದನಗಳ ಗುಂಪು ದಾಳಿ ಮಾಡಿದೆ. ಈ ಸಂದರ್ಭ ಮಹಿಳೆಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಹಿನ್ನೆಲೆ ವಾರ್ಡ್​​​​ನ ನಾಗರಿಕರು ನಗರಸಭೆ ಮುಂಭಾಗ ಶವವಿಟ್ಟು, ಬಿಡಾಡಿ ದನಗಳನ್ನು ಗೋಶಾಲೆಗೆ ಬಿಡಬೇಕು. ಜೊತೆಗೆ ಅವಘಡದ ಹೊಣೆಯನ್ನು ನಗರಸಭೆ ಹೊರಬೇಕು. ಮೃತ ಮಹಿಳೆಗೆ ಸರ್ಕಾರದಿಂದ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ : ಕಸಾಯಿಖಾನೆಗೆ ಸಾಗಿಸುತ್ತಿದ್ದ 58 ಜಾನುವಾರು ರಕ್ಷಣೆ; 7 ಆರೋಪಿಗಳ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.