ಕೊಪ್ಪಳ: ಕೊರೊನಾ ಲಸಿಕೆ ಕುರಿತು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಕೂಡ ಕೆಲವರಿಗೆ ಅದರಲ್ಲಿಯೂ ಗ್ರಾಮೀಣ ಪ್ರದೇಶದ ಜನರಿಗೆ ಲಸಿಕೆಯ ಕುರಿತು ಇನ್ನೂ ಭಯ ಹೋಗಿಲ್ಲ. ಆದ್ದರಿಂದ ಕಾರ್ಯಕರ್ತರು ಎಷ್ಟೇ ಹರಸಾಹಸಪಟ್ಟರೂ ಸಹ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುವ ಜತೆಗೆ ರಗಳೆ, ರಂಪಾಟ ಮಾಡುತ್ತಿದ್ದಾರೆ.
ಕೊಪ್ಪಳ ಡಿಸಿ, ಜಿ.ಪಂ ಸಿಇಒ ಅವರಿಂದ ಲಸಿಕೆಯ ಕುರಿತು ಜಾಗೃತಿ ಕಾರ್ಯ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಲಸಿಕೆ ಹಾಕಲು ಮುಂದಾದಾಗ ಮೈಮೇಲೆ ದೇವರು ಬಂದಂತೆ ಮಹಿಳೆಯೊಬ್ಬಳು ರಂಪಾಟ ಮಾಡಿದ್ದಾಳೆ. ದೇವರಿಗೆ ಸೂಜಿ ಚುಚ್ಚ ಬಾರದು ಎಂದು ಚಿರಾಟ ನಡೆಸಿ ಮನ ಬಂದಂತೆ ಕುಣಿದಾಡಿದ್ದಾಳೆ.
ಜಿಲ್ಲೆಯ ಕನಕಗಿರಿ ತಾಲೂಕಿನ ಹಿರೇಖೇಡ ಗ್ರಾಮದ ಯಂಕಮ್ಮ ಎಂಬಾಕೆ ರಂಪಾಟ ಮಾಡಿದ್ದು, ಕೊನೆಗೂ ಆರೋಗ್ಯ ಇಲಾಖೆ ಸಿಬ್ಬಂದಿ ಮಹಿಳೆಯ ಮನವೊಲಿಸಿ ಲಸಿಕೆ ಹಾಕಿದ್ದಾರೆ.