ಗಂಗಾವತಿ (ಕೊಪ್ಪಳ): ನಗರದ ಹೊರ ವಲಯದಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಸಮೀಪದ ಕನಕಗಿರಿ ರಸ್ತೆಯಲ್ಲಿನ ಬಯಲು ಜಾಗದಲ್ಲಿ ನೂರಾರು ಸಗಟು ವ್ಯಾಪಾರಿಗಳು ಕೋವಿಡ್ ನಿಯಮ ಗಾಳಿಗೆ ತೂರಿ ತರಕಾರಿ ಖರೀದಿಗೆ ಮುಗಿಬಿದ್ದಿದ್ದರು.
ಕಳೆದ ಎರಡು ವಾರದಿಂದ ತರಕಾರಿ ಹರಾಜು ನಡೆಯದಿರುವ ಪರಿಣಾಮ ಸೋಮವಾರ ಸಂಜೆ ತರಕಾರಿ ಹೊತ್ತ ಸುಮಾರು 50ಕ್ಕೂ ಹೆಚ್ಚು ವಾಹನಗಳು ಬಂದಿದ್ದವು. ಹೀಗಾಗಿ, ಕೋವಿಡ್ ನಿಯಮ ಗಾಳಿಗೆ ತೂರಿ ಸಗಟು ವ್ಯಾಪಾರಿಗಳು ತರಕಾರಿ ಖರೀದಿಗೆ ಮುಗಿಬಿದ್ದಿದ್ದರು.
ದುಪ್ಪಟ್ಟು ಬೆಲೆಗೆ ಮಾರಾಟ:
ನಿಗದಿತ ಬೆಲೆಗಿಂತ ಹೆಚ್ಚಿನ ಮೊತ್ತಕ್ಕೆ ಅಗತ್ಯ ವಸ್ತುಗಳು ಮಾರಾಟ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ನಗರಸಭೆ ಹಾಗೂ ಕಂದಾಯ ಅಧಿಕಾರಿಗಳ ಎಚ್ಚರಿಕೆಯ ನಡುವೆಯೇ ಸಗಟು ತರಕಾರಿ ಬೆಲೆ ಎರಡು-ಮೂರು ಪಟ್ಟು ಹೆಚ್ಚಾಗಿತ್ತು. ಸಾಮಾನ್ಯ ದಿನಗಳಲ್ಲಿ 20 ರಿಂದ 30 ರೂಪಾಯಿಗೆ ಸಿಗುವ ತರಕಾರಿ ಬೆಲೆ 60 ರೂಪಾಯಿಗೆ ಏರಿಕೆಯಾಗಿರುವುದು ಕಂಡು ಬಂತು.
ಇದನ್ನೂ ಓದಿ: ಶಾಕಿಂಗ್ ನ್ಯೂಸ್!: ಕೊರೊನಾ ಸೋಂಕಿತರಲ್ಲದಿದ್ದರೂ 40 ಮಂದಿಗೆ ಬ್ಲ್ಯಾಕ್ ಫಂಗಸ್ ದೃಢ!