ETV Bharat / state

ತುಂಗಭದ್ರಾ ಡ್ಯಾಂನಿಂದ ನೀರು ಬಿಡುಗಡೆ, ಗಂಗಾವತಿ-ಕಂಪ್ಲಿ ರಸ್ತೆ ಸಂಪರ್ಕ ಕಡಿತ - ಗಂಗಾವತಿ-ಕಂಪ್ಲಿ ಸಂಪರ್ಕ ಕಡಿತ

ರಾಜ್ಯದಲ್ಲಿ ಮಳೆರಾಯ ಆರ್ಭಟಿಸುತ್ತಿದ್ದು, ತುಂಗಭದ್ರಾ ಜಲಾಶಯದಲ್ಲಿ ಒಳಹರಿವು ಹೆಚ್ಚಾದ ಹಿನ್ನೆಲೆ ನದಿಗೆ ನೀರು ಹರಿಸಲಾಗಿದೆ. ಇದರಿಂದ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಗಂಗಾವತಿ-ಕಂಪ್ಲಿ ಸಂಪರ್ಕ ಕಡಿತ
author img

By

Published : Oct 22, 2019, 1:35 PM IST

ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು ಸುಮಾರು ಒಂದು‌ ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ. ಇದ್ರಿಂದಾಗಿ ಗಂಗಾವತಿ- ಕಂಪ್ಲಿ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಗಂಗಾವತಿ-ಕಂಪ್ಲಿ ಸಂಪರ್ಕ ಕಡಿತ

ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್​ಗಳ ಮೂಲಕ 1 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಬಿಡಲಾಗಿದೆ. ಅಧಿಕ ಪ್ರಮಾಣದಲ್ಲಿ ನದಿಯಲ್ಲಿ ನೀರು ಹರಿಯುತ್ತಿರುವುದರಿಂದ ಚಿಕ್ಕಜಂತಕಲ್ ಬಳಿಯ ಸೇತುವೆ ಮೇಲೆ‌ ನೀರು ಹರಿಯುತ್ತಿದೆ. ಹೀಗಾಗಿ ತುಂಗಭದ್ರಾ ನದಿ ಪಾತ್ರದಲ್ಲಿರುವ ಆನೆಗುಂದಿ ಬಳಿಯ ನವವೃಂದಾವನ, ವಿರುಪಾಪುರಗಡ್ಡೆ ಸಂಪರ್ಕ ಕಡಿದುಕೊಂಡಿವೆ.

ಆನೆಗುಂದಿ ಬಳಿಯ ಶ್ರೀ ಕೃಷ್ಣದೇವರಾಯ ಸಮಾಧಿಯ ಮಂಟಪ ಸಂಪೂರ್ಣ ಮುಳುಗಡೆಯಾಗಿದ್ದು, ವಿರುಪಾಪುರಗಡ್ಡೆ, ಗಂಗಾವತಿ - ಕಂಪ್ಲಿ ಸೇತುವೆ ಸೇರಿದಂತೆ ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಇನ್ನು ನದಿ ಪಾತ್ರದ ಜನ ನದಿಗೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

Intro:Body:ಕೊಪ್ಪಳ:- ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು ಸುಮಾರು ಒಂದು‌ ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ. ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ನೀರು ಹರಿಬಿಡಲಾಗಿದೆ. ಬೆಳಗ್ಗೆ ನದಿಗೆ 1 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿದ್ದು, ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಬಳಿ ಇರುವ ಗಂಗಾವತಿ- ಕಂಪ್ಲಿ ನಡುವೆ ಸಂಪರ್ಕ ಕಡಿತಗೊಂಡಿದೆ. ಅಧಿಕ ಪ್ರಮಾಣದಲ್ಲಿ ನದಿಯಲ್ಲಿ‌ ನೀರು ಹರಿಯುತ್ತಿರುವುದರಿಂದ ಸೇತುವೆ ಮೇಲೆ‌ ನೀರು ಹರಿಯುತ್ತಿದೆ. ಹೀಗಾಗಿ, ಈ ಸೇತವೆ ಮೇಲೆ ಸಂಚಾರ ಸ್ಥಗಿತವಾಗಿದೆ. ಇನ್ನು ತುಂಗಭದ್ರಾ ನದಿ ಪಾತ್ರದಲ್ಲಿರುವ ಆನೆಗುಂದಿ ಬಳಿಯ ನವವೃಂದಾವನ, ವಿರುಪಾಪುರಗಡ್ಡೆ ಸಂಪರ್ಕ ಕಡಿದುಕೊಂಡಿವೆ. ಆನೆಗುಂದಿ ಬಳಿ ಇರುವ ಶ್ರೀ ಕೃಷ್ಣದೇವರಾಯರ ಸಮಾಧಿಯ ಮಂಟಪ ಸಂಪೂರ್ಣ ಮುಳುಗಿದೆ. ವಿರುಪಾಪುರಗಡ್ಡೆ, ಗಂಗಾವತಿ - ಕಂಪ್ಲಿ ಸೇತುವೆ ಸೇರಿದಂತೆ ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಅದರಂತೆ ನದಿ ಪಾತ್ರಗಳ ಜನರು ನದಿಗೆ ಇಳಿಯದಂತೆ ಜಿಲ್ಲಾಡಳಿತ ಈಗಾಗಲೇ‌ ಸೂಚನೆ ನೀಡಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.