ಕೊಪ್ಪಳ: ಆಲಮಟ್ಟಿ ಜಲಾಶಯದಿಂದ ಜಿಂದಾಲ್‍ಗೆ ಹೋಗಿರುವ ನೀರು ಪೂರೈಕೆಯ ಪೈಪ್ ಕುಷ್ಟಗಿ ಹೊರವಲಯದಲ್ಲಿ ಒಡೆದು ಹೋಗಿ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದರ ಜೊತೆಗೆ ರೈತರ ಹತ್ತಾರು ಎಕರೆ ಭೂಮಿ ಹಾನಿಗೊಳಗಾಗಿದೆ.
ಜಿಲ್ಲೆಯ ಕುಷ್ಟಗಿ ಪಟ್ಟಣದ ಕುಷ್ಟಗಿ ಸೀಮಾದ ಸರ್ವೆ ನಂಬರ್ 436ರಲ್ಲಿರುವ ನೀರು ಸರಬರಾಜು ಪೈಪ್ ಒಡೆದಿದೆ. ಮಂಜುನಾಥ ಮಹಾಲಿಂಗಪುರ ಎಂಬುವವರಿಗೆ ಸೇರಿದ ಸುಮಾರು 7 ಎಕರೆ ಭೂಮಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿನ ಮಣ್ಣು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಪೈಪ್ ಒಡೆದು ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದರಿಂದ ರೈತರ ಜಮೀನಿನ ಮಣ್ಣು ಕೊಚ್ಚಿಕೊಂಡು ಹೋಗಿದೆ.
ಈ ಭೂಮಿಯಲ್ಲಿ ಹೆಸರು ಬಿತ್ತನೆ ಮಾಡಲಾಗಿತ್ತು. ಈಗ ಜಿಂದಾಲ್‍ಗೆ ನೀರು ಪೂರೈಸುವ ಈ ಪೈಪ್ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಜಮೀನಿಗೆ ನುಗ್ಗಿದೆ. ನೀರಿನ ರಭಸಕ್ಕೆ ಬಿತ್ತನೆ ಮಾಡಿದ್ದು ಕೊಚ್ಚಿಕೊಂಡು ಹೋಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.