ಗಂಗಾವತಿ(ಕೊಪ್ಪಳ): ಹಂಪೆಯ ಪ್ರವಾಸಕ್ಕೆಂದು ಬರುವ ನೂರಾರು ವಿದೇಶಿಗರಿಗೆ ಆನೆಗೊಂದಿಯತ್ತ ಒಂದು ಸುತ್ತು ಕಣ್ಣು ಹಾಯಿಸದೇ ಪ್ರವಾಸ ಪೂರ್ಣಗೊಳ್ಳದು. ಹೀಗೆ ಬಂದ ವಿದೇಶಿಗರಿಗೆ ಇಲ್ಲಿನ ನಿಸರ್ಗದತ್ತವಾಗಿರುವ ಹೆಬ್ಬಂಡೆಗಳ ಬೆಟ್ಟ, ಸಣಾಪುರದಂತ ಜಲಾಶಯಗಳು ಸಾಹಸ ಕ್ರೀಡೆಗೆ ಆಹ್ವಾನ ನೀಡುತ್ತವೆ.
ಹೀಗೆ ಆನೆಗೊಂದಿ ಪ್ರವಾಸಕ್ಕೆಂದು ಬಂದಿರುವ ಇಸ್ರೇಲಿನ ಪ್ರವಾಸಿಗರು ಸಣಾಪುರದಲ್ಲಿರುವ ತುಂಗಭದ್ರಾ ಜಲಾಶಯದ ಹಿನ್ನೀರಿನ ಸಮತೋಲನಾ ಜಲಾಶಯದಲ್ಲಿ ಸಾಹಸಮಯವಾಗಿರುವ ಜಲಕ್ರೀಡೆಯಲ್ಲಿ ಪಾಲ್ಗೊಂಡಿರುವುರು ಕಂಡು ಬಂತು.
ಎರಡು ಬದಿಯಲ್ಲಿ ಹಗ್ಗ ಕಟ್ಟಿ ಅದರ ಮೇಲೆ ಆಕಾಶ ನಡಿಗೆ, ವಿಭಿನ್ನವಾಗಿ ಬ್ಯಾಕ್ ಸ್ವಿಮ್ಮಿಂಗ್ನಂತಹ ಸಾಹಸಮಯ ಕ್ರೀಡೆಯಲ್ಲಿ ತೊಡಗುವ ಮೂಲಕ ವಿದೇಶಿಗರು ಗಮನ ಸೆಳೆದರು. ಇವರಿಗೆ ಸ್ಥಳೀಯ ಯುವಕರು ಸಾಥ್ ನೀಡಿದರು.
ಓದಿ: ಬಾಗಲಕೋಟೆ ಜಿಲ್ಲೆ ಅಂದರೆ ನೆನಪಾಗುವುದೇ ಈ ಪ್ರಸಿದ್ಧ ಪ್ರವಾಸಿ ಸ್ಥಳಗಳು: ಇತಿಹಾಸ ಅರಿಯಲು ಒಮ್ಮೆ ಭೇಟಿ ನೀಡಿ!