ಗಂಗಾವತಿ: ಲಾಕ್ಡೌನ್ನಲ್ಲಿ ಸಿಲುಕಿರುವ ನಾನಾ ರಾಜ್ಯದ 27 ವಲಸಿಗ ಕಾರ್ಮಿಕರು ತಮ್ಮ ತವರಿಗೆ ಮರಳಲು ನಾನಾ ಕಸರತ್ತು ನಡೆಸಿ 27 ಕಿ.ಮಿ ನಡೆದುಕೊಂಡು ಬಂದವರಿಗೆ ಗಂಗಾವತಿಯಲ್ಲಿ ತಾತ್ಕಾಲಿಕ ಸೌಲಭ್ಯ ಕಲ್ಪಿಸಲಾಗಿದೆ.
ಶಿವಮೊಗ್ಗದಲ್ಲಿ ಕೆಲಸಕ್ಕೆಂದು ಬಂದಿದ್ದ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಅಸ್ಸೋಂ, ಮಹಾರಾಷ್ಟ್ರ ಹಾಗೂ ಬಿಹಾರದ ಒಟ್ಟು 27 ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹೋಗಲು ಪರದಾಡಿದ್ದಾರೆ. ಶಿವಮೊಗ್ಗದಿಂದ ಧಾರವಾಡದವರೆಗೆ ಬಸ್ನಲ್ಲಿ ಪ್ರಯಾಣಿಸಿದ್ದಾರೆ. ಧಾರವಾಡದಿಂದ ಹುಬ್ಬಳ್ಳಿಗೆ ಕಾಲ್ನಡಿಗೆ, ಹುಬ್ಬಳ್ಳಿಯಿಂದ ಗದಗಕ್ಕೆ ಬಸ್ ಹಾಗೂ ಗದಗದಿಂದ ಬೂದಗುಂಪಾ ಕ್ರಾಸ್ಗೆ ಕ್ರೂಸರ್ನಲ್ಲಿ ಆಗಮಿಸಿದ್ದರು.
ಗಂಗಾವತಿ ಮೂಲಕ ರಾಯಚೂರು ಕಡೆ ಹೊರಟಿದ್ದ ಕಾರ್ಮಿಕರನ್ನು ತಡೆದ ಸಾರ್ವಜನಿಕರು ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಉಪಹಾರ, ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸಿದ್ದು, ಕಂದಾಯ ಅಧಿಕಾರಿಗಳು ಸಾರಿಗೆ ವ್ಯವಸ್ತೆ ಮಾಡಿ ರಾಯಚೂರಿಗೆ ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ.