ಕೊಪ್ಪಳ: ಕೊರೊನಾ ಲಸಿಕೆ ಜಿಲ್ಲೆಗೆ ಇಂದು ಸಂಜೆ ಬಂದು ತಲುಪಿದೆ. ಬಾಗಲಕೋಟೆಯಿಂದ ಲಸಿಕೆ ಹೊತ್ತ ವಾಹನ ಪೊಲೀಸ್ ಭದ್ರತೆಯೊಂದಿಗೆ ನಗರದ ಹಳೆ ಜಿಲ್ಲಾಸ್ಪತ್ರೆ ಕಟ್ಟಡದ ಆವರಣದಲ್ಲಿರುವ ಲಸಿಕಾ ಉಗ್ರಾಣಕ್ಕೆ ಆಗಮಿಸಿತು.
ಈ ವೇಳೆ ಎರಡು ವ್ಯಾಕ್ಸಿನ್ ಬಾಕ್ಸ್ಗಳಿಗೆ ಪೂಜೆ ಸಲ್ಲಿಸಿ, ಐಎಲ್ಆರ್ನಲ್ಲಿ ಸಂಗ್ರಹಿಸಿಡಲಾಯಿತು. ಮೊದಲ ಹಂತದಲ್ಲಿ 6,500 ಡೋಸ್ ವ್ಯಾಕ್ಸಿನ್ ಹಾಗೂ 37,800 ಸಿರೆಂಜ್ಗಳು ವ್ಯಾಕ್ಸಿನ್ ವ್ಯಾನ್ನಲ್ಲಿ ಬಂದಿದೆ. ಇದೇ ಜನವರಿ 16 ರಿಂದ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. ಮೊದಲ ಹಂತದಲ್ಲಿ ಜಿಲ್ಲೆಯ ನಾಲ್ಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತದೆ.
ಇದನ್ನೂ ಓದಿ:ವಿಜಯಪುರಕ್ಕೆ ಮೊದಲ ಹಂತದಲ್ಲಿ 9,500 ಡೋಸ್ ವ್ಯಾಕ್ಸಿನ್ ಆಗಮನ
ಕೊಪ್ಪಳ ನಗರದಲ್ಲಿರುವ ಜಿಲ್ಲಾಸ್ಪತ್ರೆ, ಯಲಬುರ್ಗಾ, ಕುಷ್ಟಗಿ ತಾಲೂಕು ಆಸ್ಪತ್ರೆ ಹಾಗೂ ಗಂಗಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.