ಕುಷ್ಟಗಿ(ಕೊಪ್ಪಳ): ರಾಜ್ಯದಲ್ಲಿ ನಕಲಿ ವ್ಯಾಕ್ಸಿನೇಷನ್ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಈಗ ಕೊಪ್ಪಳದಲ್ಲಿ ಇಂಥದ್ದೇ ಘಟನೆ ನಡೆದಿದೆ. ಕುಷ್ಟಗಿ ಪುರಸಭೆ ಉಪಾಧ್ಯಕ್ಷೆಯಾಗಿದ್ದ ದಿ.ತೋಟಮ್ಮ ಕಲಕಬಂಡಿ ನಿಧನರಾಗಿ 4 ತಿಂಗಳು ಕಳೆದಿದ್ದು, ಕೋವಿಡ್ ಲಸಿಕೆ ಪಡೆಯದಿದ್ದರೂ, ಎರಡನೇ ಡೋಸ್ ನೀಡಲಾಗಿದೆ ಎಂಬ ಸಂದೇಶ ಬಂದಿದೆ.
ತೋಟಮ್ಮ ಕಲಕಬಂಡಿ ಕಳೆದ ಸೆಪ್ಟೆಂಬರ್ 9 2021ರಂದು ವಯೋಸಹಜ ಕಾಯಿಲೆಯಿಂದ ಮೃತರಾಗಿದ್ದರು. ಅವರು ಮೊದಲ ಡೋಸ್ ಕೋವಿಶಿಲ್ಡ್ ಲಸಿಕೆ ಹಾಕಿಸಿಕೊಂಡಿದ್ದರು. ಆದರೆ ಅವರ ಪುತ್ರ ಅಮರೇಶ ಕಲಕಬಂಡಿ ಅವರ ಫೋನ್ಗೆ 2ನೇ ಡೋಸ್ ಲಸಿಕೆಯನ್ನು ತೋಟಮ್ಮ ಕಲಕಬಂಡಿ ಅವರಿಗೆ ನೀಡಲಾಗಿದೆ ಎಂಬ ಸಂದೇಶ ಸೋಮವಾರ ಬಂದಿದೆಯಂತೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ತೋಟಮ್ಮ ನಿಧನರಾಗಿ 4 ತಿಂಗಳಾಗಿದ್ದು ಲಸಿಕೆ ಹಾಕಿಸಿಕೊಳ್ಳದಿದ್ದರೂ, ಈ ರೀತಿಯ ಸಂದೇಶ ಬಂದಿರುವುದನ್ನು ಅಮರೇಶ ಕಲಕಬಂಡಿ ಪ್ರಶ್ನಿಸಿದ್ದಾರೆ. ಅಲ್ಲದೇ ಅಮರೇಶ ಕಲಕಬಂಡಿ ಕೂಡಾ 2ನೇ ಡೋಸ್ ಲಸಿಕೆ ಹಾಕಿಸಿಕೊಂಡಿಲ್ಲ. ಅವರಿಗೂ ಕೂಡ ಸೋಮವಾರ ಲಸಿಕೆ ಹಾಕಿಸಿಕೊಂಡಿರುವ ಮೆಸೇಜ್ ಬಂದಿದೆಯಂತೆ.
ಕೋವಿಡ್ ಲಸಿಕೆ ಹಾಕಿಸಿಕೊಳ್ಳದೇ ಈ ರೀತಿ ಮೆಸೇಜ್ಗಳು ಬಂದರೆ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುವವರಿಗೆ ವರದಾನವಾಗುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಆರೋಗ್ಯ ಇಲಾಖೆ ಈ ರೀತಿಯ ಎಡವಟ್ಟುಗಳನ್ನು ಮಾಡದಂತೆ ಅಮರೇಶ ಕಲಕಬಂಡಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ರೈಲಿನಿಂದ ಬಿದ್ದ ಪ್ರಯಾಣಿಕನನ್ನು ಕಾಪಾಡಿದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಸಿಬ್ಬಂದಿ! Video...