ಗಂಗಾವತಿ(ಕೊಪ್ಪಳ): ಇಲ್ಲಿನ ನಗರಠಾಣೆಯ ಸಿಬ್ಬಂದಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಸೋಂಕು ತಗಲಿರುವ ಹಿನ್ನೆಲೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರು ಸೇರಿ ಇಡೀ ಇಲಾಖೆಯ ಸಿಬ್ಬಂದಿಗೆ ಸಾಮೂಹಿಕವಾಗಿ ಗಂಟಲು ದ್ರವ ಪರೀಕ್ಷೆ ನಡೆಸಲಾಯಿತು.
ಗಂಟಲು ದ್ರವ ತೆಗೆಯಲು ಈವರೆಗೂ ಬಳಕೆ ಮಾಡುತ್ತಿದ್ದ ಟ್ಯೂಬ್ ಟೆಸ್ಟ್ ಬದಲಿಗೆ ಇದೇ ಮೊದಲ ಬಾರಿಗೆ ಗಂಗಾವತಿಯಲ್ಲಿ ಪೊಲೀಸರಿಗೆ ಆ್ಯಂಟಿಜೆನ್ ಕಿಟ್ ಬಳಸಲಾಯಿತು. ಆ್ಯಂಟಿಜೆನ್ ಕಿಟ್ ಬಳಿಸಿದರೆ ತ್ವರಿತಗತಿಯ ಫಲಿತಾಂಶಕ್ಕೆ ನೆರವಾಗುತ್ತದೆ ಎಂಬ ಕಾರಣಕ್ಕೆ ಉಪಯೋಗಿಸಲಾಗಿದೆ.
ನಿತ್ಯ ನೂರಾರು ಜನರ ಸಂಪರ್ಕದಲ್ಲಿರುವ ಸಿಬ್ಬಂದಿಗೆ ಸಾಮೂಹಿಕವಾಗಿ ಗಂಟಲು ದ್ರವ ಪರೀಕ್ಷೆ ನಡೆಸುವಂತೆ ಇಲಾಖೆ ಬೇಡಿಕೆ ಇಟ್ಟ ಹಿನ್ನೆಲೆ ನಗರ, ಗಂಗಾವತಿ ಗ್ರಾಮೀಣ, ಸಂಚಾರಿ, ಡಿವೈಎಸ್ಪಿ ಹಾಗೂ ಗ್ರಾಮೀಣ ಸಿಪಿಐ ವೃತ್ತದ ಸಿಬ್ಬಂದಿಗೆ ಸಾಮೂಹಿಕವಾಗಿ ಗಂಟಲು ದ್ರವ ಪರೀಕ್ಷೆ ನಡೆಸಲಾಯಿತು.