ಕೊಪ್ಪಳ : ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಉತ್ತೇಜನ ನೀಡುವ ಹಿನ್ನೆಲೆ ನಗರ ಪ್ರಾಧಿಕಾರದ ಸದಸ್ಯೆಯೋರ್ವರು ಬಂಪರ್ ಬಹುಮಾನ ನೀಡಲು ಮುಂದಾಗಿದ್ದಾರೆ. ಕೊರೊನಾ ನಿಯಂತ್ರಿಸಲು ಲಸಿಕೆ ಅಭಿಯಾನಕ್ಕೆ ವೇಗ ನೀಡಲಾಗುತ್ತಿದೆ. ಆದರೆ, ಕೆಲವೆಡೆ ಲಸಿಕೆ ಪಡೆಯುಲು ಜನ ಹಿಂದೇಟು ಹಾಕುತ್ತಿದ್ದಾರೆ.
ಇದರ ನಡುವೆ ಕೊಪ್ಪಳದ ತಗ್ಗಿನಕೇರಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಶಹನಾಜ್ ಹುಸೇನಿ ಎಂಬುವರು ವ್ಯಾಕ್ಸಿನ್ ಹಾಕಿಸಿಕೊಂಡ 50 ಜನರಿಗೆ ಸಮಾಧಾನಕರ ಬಹುಮಾನವಾಗಿ ಸೀರೆ ಹಾಗೂ ಬಂಪರ್ ಬಹುಮಾನವಾಗಿ ಒಬ್ಬರಿಗೆ ಕಿವಿಯೋಲೆ ಆಫರ್ ನೀಡಿದ್ದಾರೆ. ಲಾಟರಿ ಮೂಲಕ ಮಹಿಳೆಯರಿಗೆ ಬಹುಮಾನ ನೀಡಲಾಗುವುದು.
ಟಿಪ್ಪು ಸಲ್ತಾನ ಯುವಕ ಸಂಘ, ಅಬೂಬಕರ್ ಮಸೀದಿ, ತಗ್ಗಿನಕೇರಿ ಪಂಚ ಕಮಿಟಿಯಿಂದ ಲಸಿಕೆ ಅಭಿಯಾನ ನಡೆಯುತ್ತಿದೆ. 200 ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಈಗಾಗಲೇ 100 ಜನರಿಗ ಲಸಿಕೆ ಹಾಕಲಾಗಿದೆ.
ಇದನ್ನೂ ಓದಿ: ದೇವೇಗೌಡರ ಕುಟುಂಬಕ್ಕೆ ಒಳ್ಳೊಳ್ಳೇ ಅಧಿಕಾರವೇ ಬೇಕು.. 'ಕೈ'ಹಿಡಿದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಕಿಡಿ..