ಗಂಗಾವತಿ : ಕೇಂದ್ರ ಸರ್ಕಾರದ 2020-21ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ನಗರದ ದಂತ ವೈದ್ಯೆ ಅಪೂರ್ವ ಬಾಸೂರು ಎಂಬ ಯುವತಿ 191ನೇ ರ್‍ಯಾಂಕ್ ಗಳಿಸಿದ್ದಾರೆ.
ನಗರದ ಸೆಂಟ್ ಫಾಲ್ಸ್ ಶಾಲೆಯಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ವ್ಯಾಸಂಗ ಮಾಡಿರುವ ಇವರು, ಬಳಿಕ ಮಂಗಳೂರಿನಲ್ಲಿ ಪಿಯುಸಿ ಮುಗಿಸಿದ್ದಾರೆ. ಅಪೂರ್ವ ಅವರ ತಂದೆ ಶ್ರೀಕಾಂತ ಬಾಸೂರು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ಸಹೋದರ ಬಿಇ ಸಿವಿಲ್ ಇಂಜಿನಿಯರಿಂಗ್ ಮುಗಿಸಿದ್ದಾರೆ.
ದಂತ ವೈದ್ಯೆಯಾಗಿದ್ದ ಅಪೂರ್ವ ಐಎಎಸ್ ಆಗಬೇಕು ಎಂಬ ಕನಸು ಕಂಡಿದ್ದರು. ಇದಕ್ಕಾಗಿ ಮಾಡಿದ್ದ ಮೊದಲ ಯತ್ನ ವಿಫಲವಾಗಿದ್ದರೂ ಛಲ ಬಿಡದೇ ಮತ್ತೆ ಯುಪಿಎಸ್ಸಿ ಪರೀಕ್ಷೆಗಾಗಿ ದೆಹಲಿಯಲ್ಲಿ ಎರಡು ವರ್ಷ ತರಬೇತಿ ಪಡೆದರು. ಅಪೂರ್ವ ಅವರೊಂದಿಗೆ ಅವರ ತಾಯಿ ಕೂಡ ಎರಡು ವರ್ಷ ದೆಹಲಿಯಲ್ಲಿ ವಾಸವಾಗಿದ್ದರು.
ಓದಿ : UPSC result-2021 : 31ನೇ ರ್ಯಾಂಕ್ ಪಡೆದ ಬೆಣ್ಣೆ ನಗರಿಯ ಅವಿನಾಶ್