ETV Bharat / state

ಪರ ಮಹಿಳೆ ಜತೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದ ಪತಿ, ಕಿತ್ತಾಡಿಕೊಂಡ ಮಹಿಳೆಯರು! ವಿಡಿಯೋ... - ಇಬ್ಬರು ಮಹಿಳೆಯರು ಕೈಕೈ ಮಿಲಾಯಿಸಿದ ಘಟನೆ

ಪರ ಮಹಿಳೆ ಜೊತೆ ಪತಿಯೊಬ್ಬ ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದು, ಈ ವೇಳೆ ಮಹಿಳೆಯರು ಕಿತ್ತಾಡಿಕೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

two-women-fighting-in-an-immoral-relationship-in-koppala
ಅನೈತಿಕ ಸಂಬಂಧ ಆರೋಪ, ಕೈಕೈ ಮಿಲಾಯಿಸಿದ ಮಹಿಳೆಯರು...
author img

By

Published : Jan 7, 2021, 12:47 AM IST

ಕೊಪ್ಪಳ: ವಿವಾಹೇತರ ಸಂಬಂಧದ ಆರೋಪ ಹಿನ್ನೆಲೆ ಇಬ್ಬರು ಮಹಿಳೆಯರು ಕೈ-ಕೈ ಮಿಲಾಯಿಸಿದ ಘಟನೆ ನಗರದಲ್ಲಿ ನಡೆದಿದೆ.

ಓದಿ: ಮಾದಕ ಜಾಲ.. 2020ರಲ್ಲಿ ದಾಖಲಾಗಿದ್ದು 2766 ಪ್ರಕರಣ, 3600 ಬಂಧನ

ಸಣ್ಣ ನೀರಾವರಿ ಇಲಾಖೆಯ ಅಭಿಯಂತರ ವಿನೋದ್​ ಗುಪ್ತಾ ಎಂಬುವವರು ವಿವಾಹೇತರ ಸಂಬಂಧ ಹೊಂದಿದ್ದರೆನ್ನಲಾದ ಮಹಿಳೆಯೊಂದಿಗೆ ತಮ್ಮ ಮನೆಯಲ್ಲಿದ್ದ ಸಂದರ್ಭದಲ್ಲಿ ವಿನೋದ್ ಪತ್ನಿ ಮನೆಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ವಿನೋದ್ ಪತ್ನಿಯ ಕೈಗೆ ಈ ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ವಿವಾಹೇತರ ಸಂಬಂಧದ ಹಿನ್ನೆಲೆ ಕಿತ್ತಾಡಿಕೊಂಡ ಮಹಿಳೆಯರ ದೃಶ್ಯ

ಆಗ ವಿನೋದ್ ಪತ್ನಿ ಹಾಗೂ ಆ ಮಹಿಳೆಯ ನಡುವೆ ಗಲಾಟೆ ನಡೆದು ಕೈ-ಕೈ ಮಿಲಾಯಿಸಿದ್ದಾರೆ‌. ಸುದ್ದಿ ತಿಳಿದ ತಕ್ಷಣವೇ ಮಹಿಳಾ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಆದರೆ ಈ ಕುರಿತು ಇನ್ನೂ ಪ್ರಕರಣ ದಾಖಲಾಗಿಲ್ಲ.

ಸದ್ಯ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.