ಕೊಪ್ಪಳ: ಜಿಲ್ಲೆಯಲ್ಲಿ ಪ್ರತ್ಯೇಕ ಎರಡು ದೇವಸ್ಥಾನಗಳಲ್ಲಿ ಹುಂಡಿಗಳ ಕಳ್ಳತನ ನಡೆದಿದೆ. ಜಿಲ್ಲೆಯ ಗಂಗಾವತಿ ಹಾಗೂ ಕಾರಟಗಿ ತಾಲೂಕಿನ ತಲಾ ಒಂದು ದೇವಸ್ಥಾನದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿ ಹುಂಡಿ ಹೊತ್ತೊಯ್ದಿದ್ದಾರೆ.
ಇದನ್ನೂ ಓದಿ:ಕೋವಿಡ್ ಎರಡನೇ ಅಲೆ: ಕಲಬುರಗಿಯಲ್ಲಿ ಜಾತ್ರೆ, ಉರುಸ್ ನಿಷೇಧಿಸಿದ ಜಿಲ್ಲಾಡಳಿತ
ಹುಂಡಿಯ ಜೊತೆಗೆ ಕಳ್ಳರು ಸಿಸಿ ಕ್ಯಾಮರಾ ಡ್ರೈವ್ ಹೊತ್ತೊಯ್ದಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಗಾವತಿ ಹಾಗೂ ಕಾರಟಗಿಯ ಗ್ರಾಮೀಣ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.