ಗಂಗಾವತಿ (ಕೊಪ್ಪಳ): ನಾನಾ ಪ್ರಮಾಣ ಪತ್ರಗಳಿಗೆ ಅಧಿಕೃತತೆ ಪ್ರಮಾಣಿಕರಿಸುವುದು ಕೇವಲ ನೋಟರಿಗಳು ಮಾತ್ರ. ನ್ಯಾಯಾಲಯದ ಆವರಣದಲ್ಲಿ ಕಾಣಸಿಗುವ ನೋಟರಿಗಳಿಂದ ಅಧಿಕೃತ ಮುದ್ರೆ ಪಡೆದುಕೊಳ್ಳುವ ಎಲ್ಲ ಪ್ರಮಾಣಪತ್ರಗಳಿಗೆ ಸರ್ಕಾರದ ಮಾನ್ಯತೆ ಇರುತ್ತದೆ.
ಬಹುತೇಕ ನ್ಯಾಯಾಲಯಗಳಲ್ಲಿ ರಾಜ್ಯ ಸರ್ಕಾರದ ಮಾನ್ಯತೆ ಪಡೆದ ನೋಟರಿಗಳಿರುತ್ತವೆ. ಆದರೆ, ಇದೇ ಮೊದಲ ಬಾರಿಗೆ ಕನಕಗಿರಿ, ಕಾರಟಗಿ ಹಾಗೂ ಗಂಗಾವತಿ ಈ ಮೂರು ತಾಲೂಕಿನ ಪೈಕಿ ಕೇಂದ್ರ ಸರ್ಕಾರದಿಂದ ಕೇವಲ ಇಬ್ಬರು ಮಾತ್ರ ಅಧಿಕೃತ ನೋಟರಿ ಮಾಡುವ ಅಧಿಕಾರ ಪಡೆದುಕೊಂಡು ಗಮನ ಸೆಳೆದಿದ್ದಾರೆ.
ಗಂಗಾವತಿಯ ರಾಜೇಶ ರಾಠೋಡ್ ಹಾಗೂ ಕಾರಟಗಿಯ ಶ್ರೀಗೌರಿ (ಶ್ರೀದೇವಿ) ಮಾತ್ರ ಕೇಂದ್ರ ಸರ್ಕಾರದ ನೋಟರಿ ಮಾನ್ಯತೆ ಪಡೆದಿದ್ದಾರೆ. ಇವರು ಸಹಿ ಮಾಡುವ ಎಲ್ಲ ಪ್ರಮಾಣಪತ್ರಗಳು ಇಡೀ ದೇಶದಾದ್ಯಂತ ಮಾನ್ಯತೆ ಪಡೆದಿರುತ್ತವೆ. ಸಹಜವಾಗಿ ರಾಜ್ಯ ಸರ್ಕಾರದಿಂದ ಮನ್ನಣೆ ಪಡೆದಿರುವ ನೋಟರಿಗಳ ಪ್ರಮಾಣ ಪತ್ರಗಳು ಕೇವಲ ರಾಜ್ಯಕ್ಕೆ ಮಾತ್ರ ಸೀಮಿತವಾಗಿರುತ್ತವೆ.
ನೋಂದಣಿ ಇಲಾಖೆಯ ದಾಖಲೆ ಹೊರತು ಪಡಿಸಿದರೆ ಬಹುತೇಕ ಎಲ್ಲ ಸರ್ಕಾರದ ದಾಖಲೆಗಳ ಮೇಲೆ ನೋಟರಿಗಳ ಪ್ರಮಾಣ ಅಗತ್ಯವಿರುತ್ತದೆ. ಗಂಗಾವತಿಯ ರಾಜೇಶ ರಾಠೋಡ್ ಹಾಗೂ ಕಾರಟಗಿಯ ಶ್ರೀಗೌರಿ (ಶ್ರೀದೇವಿ) ಮಾತ್ರ ಕೇಂದ್ರ ಸರ್ಕಾರದ ನೋಟರಿ ಮಾನ್ಯತೆ ಪಡೆದಿದ್ದಾರೆ. ಇವರು ಸಹಿ ಮಾಡುವ ಎಲ್ಲ ಪ್ರಮಾಣಪತ್ರಗಳು ಇಡೀ ದೇಶದಾದ್ಯಂತ ಮಾನ್ಯತೆ ಪಡೆದಿರುತ್ತವೆ.