ETV Bharat / state

ಕೊಪ್ಪಳ ಜಿಲ್ಲೆಗೆ ಕೈತಪ್ಪಿದ ಎರಡು ನಿಗಮ ಮಂಡಳಿ ಸ್ಥಾನ: ಬಿಜೆಪಿ ನಡೆಗೆ ಕಾರ್ಯಕರ್ತರ ಅಸಮಾಧಾನ - Corporation Board position

ನಿಗಮ ಮಂಡಳಿ ಅಧ್ಯಕ್ಷರ ಹುದ್ದೆಗೆ ನೇಮಕಗೊಳಿಸಿದ್ದ ಜಿಲ್ಲೆಯ ಇಬ್ಬರು ಶಾಸಕರ ಹೆಸರನ್ನು ಹಿಂಪಡೆಯುವ ಮೂಲಕ ರಾಜ್ಯ ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

Two members of the corporation council seats from  Koppal got cancelled
ಕೊಪ್ಪಳ ಜಿಲ್ಲೆಗೆ ಕೈತಪ್ಪಿದ ಎರಡು ನಿಗಮ ಮಂಡಳಿ ಸ್ಥಾನ: ಬಿಜೆಪಿ ನಡೆಗೆ ಕಾರ್ಯಕರ್ತರ ಅಸಮಾಧಾನ
author img

By

Published : Jul 27, 2020, 10:26 PM IST

ಕೊಪ್ಪಳ: ಸಚಿವ ಸ್ಥಾನದ ಅಕಾಂಕ್ಷಿಗಳಾಗಿದ್ದ ಶಾಸಕ ಪರಣ್ಣ ಮುನವಳ್ಳಿ ಹಾಗೂ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸೂರ್​​​ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟು ಕೇವಲ ಎರಡು ಗಂಟೆಯಲ್ಲಿಯೇ ಸರ್ಕಾರ ಮರಳಿ ಪಡೆದಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಈ ಇಬ್ಬರು ಶಾಸಕರು, ಸಚಿವ ಸ್ಥಾನದ ಅಕಾಂಕ್ಷಿಗಳಾಗಿದ್ದರು. ಆದರೆ ಅಳೆದುತೂಗಿ ಯಡಿಯೂರಪ್ಪ ಸಚಿವ ಸಂಪುಟ ರಚಿಸಿದ್ದರು. ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಇದೇ ವೇಳೆ ಬಿಎಸ್​ವೈ ಭರವಸೆ ನೀಡಿದ್ದರು. ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ ಮಾರನೇ ದಿನವೇ ಪರಣ್ಣ ಮುನವಳ್ಳಿಗೆ ರಾಜ್ಯ ಹಣಕಾಸು ಸಂಸ್ಥೆ ಮತ್ತು ಬಸವರಾಜ ದಢೇಸೂರ್​​​​ ಅವರಿಗೆ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷ ಹುದ್ದೆ ನೀಡಲಾಗಿತ್ತು.

ಆದೇಶ ಹೊರಬಿದ್ದ ಕೇವಲ ಎರಡು ಗಂಟೆಯಲ್ಲಿ ಕೊಪ್ಪಳ ಜಿಲ್ಲೆಯ ಈ ಇಬ್ಬರ ಆದೇಶವನ್ನ ಸರ್ಕಾರ ಹಿಂಪಡೆದಿದೆ. ಇದರಿಂದಾಗಿ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.