ETV Bharat / state

ಗಂಗಾವತಿಯ ಜನ ವಸತಿ ಪ್ರದೇಶದಲ್ಲಿ ಜೋಡಿ ಚಿರತೆ ಪ್ರತ್ಯಕ್ಷ: ಜನರಲ್ಲಿ ಆತಂಕ - ಗಂಗಾವತಿ ಲೇಟೆಸ್ಟ್​ ಅಪ್ಡೇಟ್​ ನ್ಯೂಸ್​

ಗಂಗಾವತಿ ತಾಲೂಕಿನ ಸೂರ್ಯನಾಯಕನ ತಾಂಡದ ಬೆಟ್ಟದಲ್ಲಿ ಏಕಕಾಲಕ್ಕೆ ಎರಡು ಚಿರತೆಗಳು ಕಾಣಿಸಿಕೊಂಡಿವೆ. ಕಳೆದ ಒಂದು ತಿಂಗಳಿಂದ ಆನೆಗೊಂದಿಯ ದುರ್ಗಾ ಬೆಟ್ಟ, ಅಂಜನಾದ್ರಿ ದೇಗುಲದ ಸುತ್ತಲೂ ಕಾಣಿಸುತ್ತಿದ್ದ ಚಿರತೆಗಳು ಇದೀಗ ಜನ ವಸತಿ ಪ್ರದೇಶದಲ್ಲಿನ ಬೆಟ್ಟಗುಡ್ಡಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

Gangavathi
ಸೂರ್ಯನಾಯಕನ ತಾಂಡದ ಬೆಟ್ಟದಲ್ಲಿ ಜೋಡಿ ಚಿರತೆ ಪ್ರತ್ಯಕ್ಷ..
author img

By

Published : Dec 8, 2020, 5:02 PM IST

ಗಂಗಾವತಿ: ಇಲ್ಲಿನ ಸೂರ್ಯನಾಯಕನ ತಾಂಡಾದ ಬೆಟ್ಟದಲ್ಲಿ ಏಕಕಾಲಕ್ಕೆ ಎರಡು ಚಿರತೆಗಳು ಕಾಣಿಸಿಕೊಳ್ಳುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಿವೆ.

ಸೂರ್ಯನಾಯಕನ ತಾಂಡದ ಬೆಟ್ಟದಲ್ಲಿ ಜೋಡಿ ಚಿರತೆ ಪ್ರತ್ಯಕ್ಷ

ಸರ್ಕಾರಿ ಐಟಿಐ ಹಾಗೂ ಎಂಜಿನಿಯರಿಂಗ್ ಕಾಲೇಜು ಸಮೀಪದ ಸೂರ್ಯನಾಯಕನ ತಾಂಡದ ಬಳಿಯ ಬೆಟ್ಟದಲ್ಲಿ ಈ ಜೋಡಿ ಚಿರತೆ ಕಾಣಿಸಿದ್ದು, ದೂರದಿಂದಲೇ ಯುವಕನೋರ್ವ ಮೊಬೈಲ್​ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾನೆ. ಬೆಟ್ಟದ ಪೊಟರೆಯಿಂದ ಹೊರ ಬರುವ ಚಿರತೆ, ಬೆಟ್ಟದ ತುದಿಯಲ್ಲಿ ನಿಂತಿರುವ ಮತ್ತೊಂದು ಚಿರತೆಯ ಸನಿಹಕ್ಕೆ ಹೋಗುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಜನನಿಬಿಡ ಪ್ರದೇಶದಲ್ಲಿ ಚಿರತೆ ಹಿಂಡು ಪ್ರತ್ಯಕ್ಷ: ಗಂಗಾವತಿ ಜನತೆಯಲ್ಲಿ ಭೀತಿ

ಕಳೆದ ಒಂದು ತಿಂಗಳಿಂದ ಆನೆಗೊಂದಿಯ ದುರ್ಗಾ ಬೆಟ್ಟ, ಅಂಜನಾದ್ರಿ ದೇಗುಲದ ಸುತ್ತಲೂ ಕಾಣಿಸುತ್ತಿದ್ದ ಚಿರತೆಗಳು ಇದೀಗ ಗಂಗಾವತಿ ಸಮೀಪದ ಅದರಲ್ಲಿಯೂ ಜನ ವಸತಿ ಪ್ರದೇಶದಲ್ಲಿನ ಬೆಟ್ಟಗುಡ್ಡಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.