ETV Bharat / state

ಕುಷ್ಟಗಿ: ಕನ್ನಾಳ ಸೀಮಾದಲ್ಲಿ ಕತ್ತಲಲ್ಲಿ ಕಂಡ ಕರಡಿಗಳು - two beers Appearances

ಕನ್ನಾಳ ಸೀಮಾ ಮೀಸಲು ಅರಣ್ಯ ಪ್ರದೇಶದಲ್ಲಿ ಎರಡು ಕರಡಿಗಳು ಕಾಣಿಸಿಕೊಂಡಿದ್ದು,ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ರೈತರು ತಮ್ಮ ಜಮೀನುಗಳಿಗೆ ಹೋಗಲು ಹೆದರುತ್ತಿದ್ದಾರೆ..

two-beers-appearances
ಕರಡಿಗಳು ಪ್ರತ್ಯಕ್ಷ
author img

By

Published : Nov 17, 2020, 2:32 PM IST

ಕುಷ್ಟಗಿ (ಕೊಪ್ಪಳ): ತಾಲೂಕಿನ ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ಕನ್ನಾಳ ಸೀಮಾ ಮೀಸಲು ಅರಣ್ಯ ಪ್ರದೇಶದಲ್ಲಿ ಎರಡು ಕರಡಿಗಳು ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮೂಡಿಸಿವೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

ಕಳೆದ ರಾತ್ರಿ ಸಂಗನಾಳ ಗ್ರಾಪಂ ಬಿಲ್ ಕಲೆಕ್ಟರ್‌ ಮೌಲಾಸಾಬ್ ಅವರು ತಾವರಗೇರಾದಿಂದ ಸ್ವಗ್ರಾಮ ಸಂಗನಾಳ ಗ್ರಾಮಕ್ಕೆ ಕಾರಿನಲ್ಲಿ ಹೋಗುವಾಗ ಈ ಜೋಡಿ ಕರಡಿ ಪ್ರತ್ಯಕ್ಷವಾಗಿದೆ. ಕಾರಿನ ಹೆಡ್​​ಲೈಟ್ ಬೆಳಕು ಕಂಡು ಓಡುತ್ತಿರುವ ಕರಡಿಗಳನ್ನು ಮೊಬೈಲ್​​ನಲ್ಲಿ ಸೆರೆ ಹಿಡಿಯಲಾಗಿದೆ.

ಕರಡಿಗಳು ಕಾಣಿಸಿಕೊಂಡ ಪರಿಣಾಮ ಈ ಭಾಗದ ರೈತರು ತಮ್ಮ ಜಮೀನುಗಳಿಗೆ ಹೋಗಲು ಹೆದರುತ್ತಿದ್ದಾರೆ. ಈ ಕುರಿತು ಬಿಲ್​ ಕಲೆಕ್ಟರ್ ಮೌಲಾಸಾಬ್ ಪ್ರತಿಕ್ರಿಯಿಸಿ, ಈ ಭಾಗದಲ್ಲಿ ಕರಡಿಗಳ ಓಡಾಟದ ಬಗ್ಗೆ ಹೇಳುತ್ತಿದ್ದರೂ ಖಚಿತವಾಗಿರಲಿಲ್ಲ. ನಾನೇ ನೋಡಿ ಖಚಿತಪಡಿಸಿಕೊಂಡೆ ಎಂದರು.

ಕರಡಿಗಳು ಕಾಣಿಸಿಕೊಂಡಿರುವ ವೈರಲ್​​ ವಿಡಿಯೋ

ಅರಣ್ಯಾಧಿಕಾರಿ ರಿಯಾಜ್ ಗಣಿ ಹಾಗೂ ವನ ಪಾಲಕ ಶಂಕ್ರಗೌಡ ಅವರು ಈಟಿವಿ ಭಾರತದೊಂದಿಗೆ ಮಾತನಾಡಿ, ಈ ಭಾಗದಲ್ಲಿ ಕರಡಿಗಳಿರುವುದು ಮಾಹಿತಿ ಇತ್ತು. ಆದರೆ, ಖಚಿತವಾಗಿರಲಿಲ್ಲ. ವಿಡಿಯೋ ಗಮನಿಸಿದ್ದೇವೆ.

ಈ ಹಿನ್ನೆಲೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ಅವುಗಳ ಹಿಡಿಯಲು ಚರ್ಚಿಸುತ್ತೇನೆ. ಗ್ರಾಮಸ್ಥರು ರಾತ್ರಿ ವೇಳೆ ಸಂಚರಿಸದಂತೆ ಮತ್ತು ವನ್ಯಜೀವಿ ಕರಡಿಗಳು ಕಂಡು ಬಂದರೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಕೋರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.