ETV Bharat / state

ಮುನಿರಾಬಾದ್​ಗೆ ತುಂಗಾ ಭದ್ರಾ ಜಲಾಶಯದಿಂದ ನೀರು ಬಿಡುಗಡೆ - ಮುನಿರಾಬಾದ್​​ನಲ್ಲಿರುವ ತುಂಗಭದ್ರಾ ಜಲಾಶಯ

ಕೊಪ್ಪಳ ಜಿಲ್ಲೆಯ ಮುನಿರಾಬಾದ್​​ಗೆ ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ ನದಿಗೆ 20 ಸಾವಿರ ಕ್ಯೂಸೆಕ್ಸ್ ನೀರು ಬಿಡಲಾಗಿದೆ.

ಮುನಿರಾಬಾದ್​ನ ತುಂಗಾ ಭದ್ರಾ ಜನಾಶತಯದಿಂದ ನೀರು ಬಿಡುಗಡೆ
author img

By

Published : Aug 12, 2019, 4:01 AM IST

ಕೊಪ್ಪಳ: ಜಿಲ್ಲೆಯ ಮುನಿರಾಬಾದ್​ಗೆ ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ ನದಿಗೆ 20 ಸಾವಿರ ಕ್ಯೂಸೆಕ್ಸ್ ನೀರು ಹೊರ ಬಿಡಲಾಗಿದೆ.

ಮುನಿರಾಬಾದ್​ನ ತುಂಗಾ ಭದ್ರಾ ಜನಾಶತಯದಿಂದ ನೀರು ಬಿಡುಗಡೆ

ಜಲಾಶಯದ 10 ಕ್ರಸ್ಟ್ ಗೇಟ್ ಗಳ ಮೂಲಕ‌ ನದಿಗೆ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯಕ್ಕೆ ಸದ್ಯಕ್ಕೆ ಒಟ್ಟು 2,26,016 ಕ್ಯೂಸೆಕ್ ನೀರು ಒಳಹರಿವು ಇದೆ. ಹೀಗಾಗಿ, ಜಲಾಶಯದಲ್ಲಿ 76 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಹೆಚ್ಚಿದ ಒಳಹರಿವಿನಿಂದ ನದಿಗೆ 20 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಒಳಹರಿವಿನ ಪ್ರಮಾಣ ಇನ್ನೂ ಹೆಚ್ಚಾದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಬಿಡುವ ಸಾಧ್ಯತೆ ಇದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ‌.

ಇನ್ನು ನದಿಪಾತ್ರದ ಹಾಗೂ ಹಿನ್ನೀರ ಪ್ರದೇಶದ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಹಾಗೂ ಸುರಕ್ಷಿತ ಸ್ಥಳದಲ್ಲಿರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಇನ್ನು ಹಿನ್ನೀರು ಪ್ರದೇಶದಲ್ಲಿ ನೀರಿಲ್ಲದ ಸಮಯದಲ್ಲಿ ಬಿತ್ತನೆ ಮಾಡಲಾಗಿದ್ದ ಬೆಳೆಗಳು ಈಗ ಜಲಾವೃತವಾಗುತ್ತಿವೆ. ಹಿನ್ನೀರ ಪ್ರದೇಶದಲ್ಲಿರುವ ಜಮೀನುಗಳ ಮೇಲೆ ರೈತರಿಗೆ ಯಾವುದೇ ಹಕ್ಕು ಇಲ್ಲವಾದ್ದರಿಂದ ಪರಿಹಾರ ಕೇಳುವಂತಿಲ್ಲ. ಹೀಗಾಗಿ ಬಂದಿರುವ ಬೆಳೆಯನ್ನು ಕೆಲ ಗ್ರಾಮಗಳ ರೈತರು ನೀರಿನಲ್ಲಿಯೇ ಕಟಾವು ಮಾಡಿ ತೆಗೆದುಕೊಂಡು ಹೋಗುತ್ತಿದ್ದಾರೆ.

Intro:Body:

koppal story

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.