ಕೊಪ್ಪಳ: ಮುಷ್ಕರನಿರತ ಸಾರಿಗೆ ಸಿಬ್ಬಂದಿ ಮೇಲೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವರ್ಗಾವಣೆ ಅಸ್ತ್ರ ಪ್ರಯೋಗಿಸಿದ್ದು, ಕೊಪ್ಪಳ ಘಟಕದ ಕೆಲ ನೌಕರರನ್ನು ಅಂತರ್ ವಿಭಾಗಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಕೊಪ್ಪಳ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಾಲಕರು, ನಿರ್ವಾಹಕರು ಹಾಗೂ ಕಂಪ್ಯೂಟರ್ ಆಪರೇಟರ್ಗಳನ್ನು ಬೀದರ್ ಹಾಗೂ ಯಾದಗಿರಿ ವಿಭಾಗಗಳಿಗೆ ವರ್ಗಾವಣೆ ಮಾಡಲಾಗಿದೆ. ಕೊಪ್ಪಳ ಘಟಕದಲ್ಲಿ ಕಂಪ್ಯೂಟರ್ ಆಪರೇಟರ್ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಜುನಾಥ ರೆಡ್ಡಿ ಎಂಬುವರನ್ನು ಯಾದಗಿರಿ ವಿಭಾಗದ ಗುರುಮಠಕಲ್ಗೆ, ಮಂಜುನಾಥ ಕುಂದಗೋಳ ಎಂಬುವರನ್ನು ಕಲಬುರಗಿ ವಿಭಾಗದ ಕಾಳಗಿ ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ.
ಇನ್ನು ಕೊಪ್ಪಳ ವಿಭಾಗದ ವಿವಿಧ ಘಟಕಗಳ ಚಾಲಕ ಹಾಗೂ ನಿರ್ವಾಹಕರಾದ ನಾಗೇಶ ಬಡಿಗೇರ, ಶ್ಯಾಮೀದಸಾಬ, ಬಸನಗೌಡ ಪಾಟೀಲ್, ಬಿ.ಬಿ. ನಾಗಪ್ಪ, ನಾಗರಾಜ ಹಾಗೂ ಡಿ.ಬಿ.ಶ್ರೀಶೈಲ ಎಂಬುವರನ್ನು ಅಂತರ್ ವಿಭಾಗಕ್ಕೆ ವರ್ಗಾವಣೆ ಮಾಡುವ ಮೂಲಕ ಮುಷ್ಕರ ನಿರತ ಸಿಬ್ಬಂದಿಗೆ ಈಕರಸಾ ಸಂಸ್ಥೆ ಶಾಕ್ ನೀಡಿದೆ.