ಕುಷ್ಟಗಿ (ಕೊಪ್ಪಳ): ಕೊಪ್ಪಳ ಜಿಲ್ಲೆ ಕುಷ್ಟಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಯಾಗಿ ಸೇವೆಯಲ್ಲಿದ್ದ ಮರಿಬಸಪ್ಪ ಸಜ್ಜನ್ ಅವರನ್ನು ದಿಢೀರ್ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.
![Transfer of Kushtagi APMC Secretary ಕುಷ್ಟಗಿ ಎಪಿಎಂಸಿ ಕಾರ್ಯದರ್ಶಿ ದಿಢೀರ್ ವರ್ಗಾವಣೆ](https://etvbharatimages.akamaized.net/etvbharat/prod-images/kn-kst-03-13-apmc-secretry-transfer-kac10028_13062020192222_1306f_1592056342_790.jpg)
ಸೇವೆಯಲ್ಲಿದ್ದ ಮರಿಬಸಪ್ಪ ಸಜ್ಜನ್ ಅವರನ್ನು ಬೀದರ್ ಜಿಲ್ಲೆ ಔರಾದ್ ತಾಲೂಕಿನಲ್ಲಿ ಖಾಲಿ ಇರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ವರ್ಗಾಯಿಸಲಾಗಿದೆ.
ಓದಿ:ಮೌಸ್ ಹಿಡಿಯೋ ಕೈಯಲ್ಲಿ ಗುದ್ದಲಿ, ಸಲಕೆ: ಕೆಲಸ ಕಳೆದುಕೊಂಡ ಪದವೀಧರರಿಗೆ ಆಸರೆಯಾದ ನರೇಗಾ!
ಇವರ ಸ್ಥಾನಕ್ಕೆ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಎಪಿಎಂಸಿ ಕಾರ್ಯದರ್ಶಿ ಟಿ. ನೀಲಪ್ಪ ಶೆಟ್ಟಿ ಅವರನ್ನು ವರ್ಗಾಯಿಸಲಾಗಿದೆ ಎಂದು ಸಹಕಾರ ಇಲಾಖೆ ಅಧೀನ ಕಾರ್ಯದರ್ಶಿ ಬಿ.ಎಸ್. ಮಂಜುನಾಥ ಆದೇಶ ಹೊರಡಿಸಿದ್ದಾರೆ.