ಕೊಪ್ಪಳ: ನಗರದಲ್ಲಿ ನಡೆದ ಬಿಜೆಪಿರ‍್ಯಾಲಿಯಿಂದ ಟ್ರಾಫಿಕ್ ಜಾಮ್ ಉಂಟಾಗಿ, ವಾಹನಗಳ ಮಧ್ಯೆ ಆಂಬ್ಯುಲೆನ್ಸ್ ಸಿಕ್ಕಿಹಾಕಿಕೊಂಡು ರೋಗಿಯೊಬ್ಬರು ಪರದಾಡಿದ ಘಟನೆ ನಡೆಯಿತು.
ನಗರದ ವಾರಕಾರ್ ಓಣಿ ರಸ್ತೆಯಲ್ಲಿ ಈ ಘಟನೆ ನಡೆಯಿತು. ಕೊಪ್ಪಳ ಲೋಕಸಭಾ ಅಭ್ಯರ್ಥಿ ಸಂಗಣ್ಣ ಕರಡಿ ನಾಮಪತ್ರ ಸಲ್ಲಿಸಿದ ಬಳಿಕ ನಗರದಲ್ಲಿ ಬುಧವಾರ ಬಿಜೆಪಿ ಬೃಹತ್ ಮೆರವಣಿಗೆ ಹಮ್ಮಿಕೊಂಡಿತ್ತು. ಮೆರವಣಿಗೆ ಹಿನ್ನೆಲೆಯಲ್ಲಿ ಜವಾಹರ ರಸ್ತೆ ಸಂಪೂರ್ಣವಾಗಿ ಜಾಮ್ ಆಗಿತ್ತು.
ಇದರಿಂದಾಗಿ ಆಂಬ್ಯುಲೆನ್ಸ್ ವಾರಕಾರ ಓಣಿಯ ರಸ್ತೆ ಮೂಲಕ ತೆರಳಲು ಬಂದಿತ್ತು. ಆ ರಸ್ತೆಯಲ್ಲಿಯೂ ಸಹ ಟ್ರಾಫಿಕ್ ಜಾಮ್ ಆಗಿತ್ತು. ಇದರಿಂದಾಗಿ ಆಂಬ್ಯುಲೆನ್ಸ್ ಇತರೆ ವಾಹನಗಳ ಮಧ್ಯೆ ಅರ್ಧ ಗಂಟೆಗೂ ಹೆಚ್ಚು ಕಾಲು ಸಿಲುಕಿಕೊಂಡಿತ್ತು.ಪರಿಣಾಮ ಅದರಲ್ಲಿದ್ದ ರೋಗಿ ಪರದಾಡುವಂತಾಯಿತು.