ಕೊಪ್ಪಳ : ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ಹೊರಟಿದ್ದ ಟ್ರ್ಯಾಕ್ಟರ್ವೊಂದು ಇದ್ದಕ್ಕಿದ್ದಂತೆ ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು, ಆಸ್ಪತ್ರೆಯಲ್ಲಿ ಮತ್ತಿಬ್ಬರು ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಕನಕಗಿರಿ ತಾಲೂಕು ನವಲಿ ಗ್ರಾಮದ ಬಳಿಯ ರೈಸ್ ಟೆಕ್ನಾಲಜಿ ಪಾರ್ಕ್ ಬಳಿ ಅಪಘಾತ ಸಂಭವಿಸಿದೆ. ಕಾರಟಗಿ ಪಟ್ಟಣದ 16ನೇ ವಾರ್ಡಿನ ನಿವಾಸಿಗಳಾದ ಯಮನೂರಪ್ಪ (55) ಮತ್ತು ಅಂಬಮ್ಮ (50) ಸ್ಥಳದಲ್ಲೇ ಮೃತಪಟ್ಟರೆ ದ್ಯಾವಮ್ಮ (60), ಶೇಷಪ್ಪ ಬಂಡಿ (40) ಕಾರಟಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಕಾರಟಗಿ ಆಸ್ಪತ್ರೆಗೆ ರವಾನಿಸಲಾಗಿದೆ. ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ಇವರು ಕಾರಟಗಿಯಿಂದ ಕನಕಗಿರಿಗೆ ಟ್ರ್ಯಾಕ್ಟರ್ನಲ್ಲಿ ಹೊರಟಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.