ಕೊಪ್ಪಳ: ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಮಹಿಳೆ ಸಾವನ್ನಪ್ಪಿ, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದ ಬಳಿ ನಡೆದಿದೆ.
ಶರಣವ್ವ ಶರಣಪ್ಪ ಹಾಸಗಲ್ ಮೃತಪಟ್ಟ ಮಹಿಳೆ ಎನ್ನಲಾಗಿದೆ. ಇನ್ನು ಘಟನೆಯಲ್ಲಿ ಹನುಮಪ್ಪ ಉಪ್ಪಾರ, ಖಾದರಬೀ, ನಿಂಗಪ್ಪ, ಪರಸಪ್ಪ ಹಾಗೂ ಶರಣಪ್ಪ ಎಂಬುವವರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಈ ಆರು ಜನರು ಬೆಳೆ ಕಟಾವು ಕೆಲಸಕ್ಕಾಗಿ ಹೊರಟಿದ್ದ ಸಂದರ್ಭದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ.
ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.