ಗಂಗಾವತಿ: ಪ್ರವಾಸೋದ್ಯಮ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಕೊಪ್ಪಳ ಹಾಗೂ ಗಂಗಾವತಿ ತಾಲೂಕಿಗೆ ಸಚಿವ ಸಿ.ಟಿ. ರವಿ ಭೇಟಿ ನೀಡಿದ್ರು.
ಹಂಪಿ ಉತ್ಸವದಂತೆ ಇನ್ಮುಂದೆ ಆನೆಗೊಂದಿಯಲ್ಲೂ ಪ್ರತಿ ವರ್ಷ ಆನೆಗೊಂದಿ ಉತ್ಸವ ಆಚರಿಸಲಾಗುವುದು. ಈ ಸಂಬಂಧ ಈಗಾಗಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದ್ರು.
ಆನೆಗೊಂದಿ ಉತ್ಸವ ದಿನಾಂಕ ನಿಗದಿಗೆ ಸೂಚನೆ:
ತಾಲೂಕಿನ ಧಾರ್ಮಿಕ ಪವಿತ್ರ ತಾಣ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ ಸಚಿವರು, ಸ್ಥಳೀಯರಿಂದ ಮನವಿ ಸ್ವೀಕರಿಸಿದ್ರು. ಕೊಪ್ಪಳ ಜಿಲ್ಲಾಧಿಕಾರಿಗಳ ಬಳಿ ಈಗಾಗಲೇ ಉತ್ಸವ ಆಚರಣೆಗೆ 60 ಲಕ್ಷ ರೂ ಹಣವಿದೆ. ಈ ಮೊತ್ತಕ್ಕೆ 10 ಲಕ್ಷ ರೂಪಾಯಿ ಬಡ್ಡಿ ಸೇರಿ 70 ಲಕ್ಷ ಆಗಿದೆ. ಸರ್ಕಾರದಿಂದ ಇನ್ನೂ ಹೆಚ್ಚುವರಿ ಅನುದಾನವನ್ನು ಹೊಂದಿಸಿ ಕೊಡಲಾಗುವುದು ಎಂದು ಭರವಸೆ ಕೊಟ್ಟರು.