ETV Bharat / state

ವಿಶೇಷತೆಗೆ ಸಾಕ್ಷಿಯಾಯಿತು ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದಲ್ಲಿ ನಡೆದ ಈ ಮದುವೆ!

ಮದುವೆ ಕಾರ್ಯಕ್ರಮದಲ್ಲಿ ಮತದಾನದ ಡೆಮೋ‌, ಮತದಾನದ ಬಗ್ಗೆ ಜಾಗೃತಿ ಹಾಗೂ ಕಡ್ಡಾಯ ಮತದಾನ ಮಾಡುವ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ಕೊಪ್ಪಳದ ಈ ಮದುವೆ ವಿಶೇಷತೆಗೆ ಸಾಕ್ಷಿಯಾಯಿತು.

ವಿಶೇಷತೆಗೆ ಸಾಕ್ಷಿಯಾದ ಮದುವೆ
author img

By

Published : Mar 13, 2019, 9:29 PM IST

ಕೊಪ್ಪಳ: ಮತದಾನ ಮಾಡೋದು ಪ್ರತಿಯೊಬ್ಬರ ಹಕ್ಕು. ತಪ್ಪದೆ ಮತದಾನ ಮಾಡಬೇಕು. ಹೀಗೆ ಮದುವೆಗೆ ಬಂದ ಜನರಿಗೆ ಪ್ರತಿಜ್ಞೆ ಮಾಡಿಸುವ ಮೂಲಕ ಆ ಮದುವೆ ವಿಶೇಷತೆಗೆ ಸಾಕ್ಷಿಯಾಯಿತು. ಈ ವಿಶೇಷ ಮದುವೆ ನಡೆದಿದ್ದು ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದಲ್ಲಿ.

ತಾಲೂಕಿನ‌ ಹಟ್ಟಿ ಗ್ರಾಮದಲ್ಲಿ ಇಂದು ದ್ಯಾಮಣ್ಣ ಬೇವೂರು ಹಾಗೂ ನಿರ್ಮಲಾ ಕುರ್ನಾಳ ಎಂಬ ನೂತನ ವಧು-ವರರ ಜೊತೆಗೆ ಇನ್ನೂ ನಾಲ್ಕು ಜೋಡಿಯ ವಿವಾಹ ನೆರವೇರಿತು. ವರ ದ್ಯಾಮಣ್ಣ ತನ್ನ ಮದುವೆಯ ಜೊತೆಗೆ ತನ್ನದೇ ಊರಿನ ಇನ್ನೂ ನಾಲ್ಕು ಜೋಡಿಗಳ ಮದುವೆಯನ್ನು ಉಚಿತವಾಗಿ ನೆರವೇರಿಸಿ ಸಮಾಜಿಕ ಕಳಕಳಿ‌ ಮೆರೆದಿದ್ದಾರೆ. ಇದರ ಜೊತೆಗೆ ಮದುವೆಗೆ ಬಂದವರಿಗೆ ಕಡ್ಡಾಯವಾಗಿ ಮತದಾನ ಮಾಡುವ ಕುರಿತಂತೆ ಜಾಗೃತಿ‌ ಮೂಡಿಸುವ ಕೆಲಸ ಮಾಡಿದರು‌. ಇನ್ನು ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ, ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಜಿಲ್ಲಾ ಸ್ವೀಪ್ ಸಮಿತಿ, ಕನ್ನಡ ಜಾನಪದ ಪರಿಷತ್ ಈ ಕಾರ್ಯಕ್ಕೆ ಕೈಜೋಡಿಸಿದ್ದವು.

ವಿಶೇಷತೆಗೆ ಸಾಕ್ಷಿಯಾದ ಮದುವೆ

ಮದುವೆ ಕಾರ್ಯಕ್ರಮದ ಸ್ಥಳದಲ್ಲಿ ಅಣಕು‌ ಮತದಾನ (ಡೆಮೋ) ಮಾಡಲಾಯಿತು. ಮದುವೆಗೆ ವಧು-ವರರು ಸೇರಿದಂತೆ ಮದುವೆಗೆ ಬಂದವರು ಅಣಕು ಮತದಾನ ಮಾಡುವ ಮೂಲಕ ಮತದಾನದ ಸಂದರ್ಭದಲ್ಲಾಗುವ ಗೊಂದಲಗಳನ್ನು ಪರಿಹರಿಸಿಕೊಂಡರು.

ಈ ಕುರಿತು ಮಾತನಾಡಿದ ವರ ದ್ಯಾಮಣ್ಣ ಬೇವೂರ, ಈಗ ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಮತದಾನದ ಹಕ್ಕು ಹೊಂದಿರುವ ಪ್ರತಿಯೊಬ್ಬರನ್ನು ಮತದಾನ ಮಾಡಲು ಪ್ರೇರೇಪಿಸಬೇಕು ಎನಿಸಿತು. ಹೀಗಾಗಿ, ಈ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಮದುವೆ ಸಂದರ್ಭದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಿದೆವು‌. ಜೊತೆಗೆ ಮಹಿಳಾ ಸಾಧಕರಿಗೆ ಸನ್ಮಾನ ಆಯೋಜಿಸಿದೆವು ಎಂದರು.

ಅಷ್ಟೇ ಅಲ್ಲದೇ, ಮದುವೆ ಕಾರ್ಯಕ್ರಮದಲ್ಲಿ ಮತದಾನದ ಡೆಮೋ‌ ಜೊತೆಗೆ ಮತದಾನದ ಬಗ್ಗೆ ಜಾಗೃತಿ ಹಾಗೂ ಕಡ್ಡಾಯ ಮತದಾನ ಮಾಡುವ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಗಿದೆ. ಮತದಾನದ ಹಕ್ಕು ಪಡೆದಿರುವ ಪ್ರತಿಯೊಬ್ಬರು ಮತದಾನ ಮಾಡುವ ನಿಟ್ಟಿನಲ್ಲಿ ಖಾಸಗಿ ಕಾರ್ಯಕ್ರಮಗಳಲ್ಲಿಯೂ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಅಧ್ಯಕ್ಷೆ ಜ್ಯೋತಿ ಗೊಂಡಬಾಳ ಹೇಳಿದರು.

Intro:

Body:ಕೊಪ್ಪಳ:- ಮತದಾನ ಮಾಡೋದು ಪ್ರತಿಯೊಬ್ಬರ ಹಕ್ಕು. ತಪ್ಪದೆ ಮತದಾನ ಮಾಡಬೇಕು. ಹೀಗೆ ಮದುವೆಗೆ ಬಂದ ಜನರಿಗೆ ಪ್ರತಿಜ್ಞೆ ಮಾಡಿಸುವ ಮೂಲಕ ಆ ಮದುವೆ ವಿಶೇಷತೆಗೆ ಸಾಕ್ಷಿಯಾಯಿತು. ಈ ವಿಶೇಷತೆಯ ಮದುವೆ ನಡೆದಿದ್ದು ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದಲ್ಲಿ.
ತಾಲೂಕಿನ‌ ಹಟ್ಟಿ ಗ್ರಾಮದಲ್ಲಿ ಇಂದು ದ್ಯಾಮಣ್ಣ ಬೇವೂರು ಹಾಗೂ ನಿರ್ಮಲಾ ಕುರ್ನಾಳ ಎಂಬ ನೂತನ ವಧುವರರ ಜೊತೆಗೆ ಇನ್ನೂ ನಾಲ್ಕು ಜೋಡಿಯ ವಿವಾಹ ನೆರವೇರಿತು. ವರ ದ್ಯಾಮಣ್ಣ ತನ್ನ ಮದುವೆಯ ಜೊತೆಗೆ ತನ್ನದೆ ಊರಿನ ಇನ್ನೂ ನಾಲ್ಕು ಜೋಡಿಗಳ ಮದುವೆಯನ್ನು ಉಚಿತವಾಗಿ ನೆರವೇರಿಸಿ ಸಮಾಜಿಕ ಕಳಕಳಿ‌ ಮೆರೆದಿದ್ದಾರೆ. ಇದರ ಜೊತೆಗೆ ಮದುವೆಗೆ ಬಂದವರಿಗೆ ಕಡ್ಡಾಯವಾಗಿ ಮತದಾನ ಮಾಡುವ ಕುರಿತಂತೆ ಜಾಗೃತಿ‌ ಮೂಡಿಸುವ ಕೆಲಸ ಮಾಡಿದರು‌. ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ, ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಜಿಲ್ಲಾ ಸ್ವೀಪ್ ಸಮಿತಿ, ಕನ್ನಡ ಜಾನಪದ ಪರಿಷತ್ ಈ ಕಾರ್ಯಕ್ಕೆ ಕೈಜೋಡಿಸಿದ್ದವು. ಮದುವೆ ಕಾರ್ಯಕ್ರಮದ ಸ್ಥಳದಲ್ಲಿ ಅಣಕು‌ ಮತದಾನ (ಡೆಮೋ) ಮಾಡಲಾಯಿತು. ಮದುವೆಗೆ ವಧು ವರರು ಸೇರಿದಂತೆ ಮದುವೆಗೆ ಬಂದವರು ಅಣಕು ಮತದಾನ ಮಾಡುವ ಮೂಲಕ ಮತದಾನದ ಸಂದರ್ಭದಲ್ಲಾಗುವ ಗೊಂದಲಗಳನ್ನು ಪರಿಹರಿಸಿಕೊಂಡರು. ಈಗ ಲೋಕಸಭಾ ಚುನಾವಣೆಗಳು ಘೋಷಣೆಯಾಗಿವೆ. ಮತದಾನದ ಹಕ್ಕು ಹೊಂದಿರುವ ಪ್ರತಿಯೊಬ್ಬರು ಮತದಾನ ಮಾಡಲು ಪ್ರೇರಿಸಬೇಕು ಎನಿಸಿತು. ಹೀಗಾಗಿ, ಈ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಮದುವೆ ಸಂದರ್ಭದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡೆದೆವು‌. ಜೊತೆಗೆ ಮಹಿಳಾ ಸಾಧಕರಿಗೆ ಸನ್ಮಾನ ಆಯೋಜಿಸಿದೆವು ಎನ್ನುತ್ತಾರೆ ವರ ದ್ಯಾಮಣ್ಣ ಬೇವೂರ ಅವರು. ಮದುವೆ ಕಾರ್ಯಕ್ರಮದಲ್ಲಿ ಮತದಾನದ ಡೆಮೋ‌, ಮತದಾನದ ಬಗ್ಗೆ ಜಾಗೃತಿ ಹಾಗೂ ಕಡ್ಡಾಯ ಮತದಾನ ಮಾಡುವ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಗಿದೆ. ಮತದಾನದ ಹಕ್ಕು ಪಡೆದಿರುವ ಪ್ರತಿಯೊಬ್ಬರು ಮತದಾನ ಮಾಡುವ ನಿಟ್ಟಿನಲ್ಲಿ ಖಾಸಗಿ ಕಾರ್ಯಕ್ರಮಗಳಲ್ಲಿಯೂ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಸ್ವಾಭಿಮಾನಿ ಮಹಿಳಾ ಸಂಚಲನ ಸಮಿತಿ ಅಧ್ಯಕ್ಷೆ ಜ್ಯೋತಿ ಗೊಂಡಬಾಳ ತಿಳಿಸಿದರು. ಒಟ್ಟಾರೆಯಾಗಿ ಗ್ರಾಮೀಣ ಭಾಗದಲ್ಲಿ ನಡೆದ ಈ ಮದುವೆ ವಿಶೇಷತೆಗೆ ಸಾಕ್ಷಿಯಾಯಿತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.