ಕೊಪ್ಪಳ: ನಿಧಿ ಆಸೆಗಾಗಿ ಶಿವಲಿಂಗವನ್ನು ಕಿತ್ತು ಹಾಕಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ತಾಲೂಕಿನ ಶಿವಪುರ ಗ್ರಾಮದ ಬಳಿ ಇರುವ ಸೋಮನಾಥ ದೇವಾಲಯದಲ್ಲಿ ಶಿವಲಿಂಗವನ್ನು ಧ್ವಂಸಗೊಳಿಸಿ ನಿಧಿ ಶೋಧಿಸಿದ್ದಾರೆ ಎನ್ನಲಾಗ್ತಿದೆ.
ಶಿವಪುರದ ಪಕ್ಕದ ಬೆಟ್ಟದಲ್ಲಿರುವ ಸೋಮನಾಥ ದೇವಾಲಯ ವಿಜಯನಗರ ಸಾಮ್ರಾಜ್ಯದ ಕಾಲದ್ದಾಗಿದೆ. ಈ ಐತಿಹಾಸಿಕ ದೇವಸ್ಥಾನದಲ್ಲಿ ಶಿವಲಿಂಗ ಪ್ರತಿಷ್ಠಾನೆ ಮಾಡಿರುವ ಸ್ಥಳದ ಸುತ್ತ ಕಬ್ಬಿಣದ ಸಲಾಕೆಗಳಿಂದ ಅಗೆಯಲಾಗಿದೆ. ಇದರಿಂದ ಅಲ್ಲಿದ್ದ ಶಿವಲಿಂಗ ಮೂರ್ತಿ ಭಗ್ನವಾಗಿದೆ. ನಂತರ ಕಬ್ಬಿಣದ ಸಲಕರಣೆಗಳನ್ನು ಅಲ್ಲಿಯೇ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗ್ಗೆ ಪೂಜೆಗೆಂದು ಬಂದಿದ್ದ ಅರ್ಚಕ ಕೃಷ್ಣ ಎಂಬುವವರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮುನಿರಾಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಕಾರವಾರ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ