ETV Bharat / state

ಕೊಪ್ಪಳಕ್ಕೆ ಮತ್ತೊಂದು ಆತಂಕ... ಕೊರೊನಾ ಸೋಂಕಿತನಿದ್ದ ಬಸ್​ನಲ್ಲಿದ್ರಂತೆ 9 ಮಂದಿ ಭಿಕ್ಷುಕರು!

author img

By

Published : May 20, 2020, 1:25 PM IST

ಕೊಪ್ಪಳದಲ್ಲಿ ಮೂರು ಜನ ಕೊರೊನಾ ಸೋಂಕಿತರೊಂದಿಗೆ 141 ಜನ ಪ್ರಾಥಮಿಕ ಸಂಪರ್ಕ ಹಾಗೂ 97 ಮಂದಿ ದ್ವೀತಿಯ ಸಂಪರ್ಕ ಹೊಂದಿದ್ದಾರೆ. ಪ್ರಾಥಮಿಕ ಸಂಪರ್ಕ ಹೊಂದಿದ 141 ಜನರಲ್ಲಿ ಇಬ್ಬರು ಇನ್ನೂ ಸಿಕ್ಕಿಲ್ಲ. ಉಳಿದವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್​ ಕುಮಾರ್ ತಿಳಿಸಿದರು.

there were 9 beggars in bus in which corona patient travelled
ಕೊಪ್ಪಳಕ್ಕೆ ಮತ್ತೊಂದು ಆತಂಕ,,, ಸೊಂಕಿತನಿದ್ದ ಬಸ್​ನಲ್ಲಿದ್ರು 9 ಬಿಕ್ಷುಕರು....

ಕೊಪ್ಪಳ: ಜಿಲ್ಲೆಯಲ್ಲಿ ನಿನ್ನೆ ಪತ್ತೆಯಾಗಿರುವ ಮೂವರು ಕೊರೊನಾ ಸೋಂಕಿತರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದವರನ್ನೆಲ್ಲಾ ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗಿದೆಯಾದರೂ ಇನ್ನೂ ಇಬ್ಬರು ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್​ ಕುಮಾರ್ ತಿಳಿಸಿದ್ದಾರೆ.

ಮೂರು ಜನ ಕೊರೊನಾ ಸೋಂಕಿತರೊಂದಿಗೆ 141 ಜನ ಪ್ರಾಥಮಿಕ ಸಂಪರ್ಕ ಹಾಗೂ 97 ಮಂದಿ ದ್ವೀತಿಯ ಸಂಪರ್ಕ ಹೊಂದಿದ್ದಾರೆ. ಪ್ರಾಥಮಿಕ ಸಂಪರ್ಕ ಹೊಂದಿದ 141 ಜನರಲ್ಲಿ ಇಬ್ಬರು ಇನ್ನೂ ಸಿಕ್ಕಿಲ್ಲ. ಉಳಿದವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದರು.

P-1173 ಸೋಂಕಿತನೊಂದಿಗೆ 90 ಜನ ಪ್ರಾಥಮಿಕ ಹಾಗೂ 87 ಜನ ದ್ವೀತಿಯ ಸಂಪರ್ಕ ಹೊಂದಿದ್ದಾರೆ‌. ಈ ಸೋಂಕಿತ ಮುಂಬೈಯಿಂದ ಹುಬ್ಬಳ್ಳಿ, ಗದಗ ಮೂಲಕ ಕೊಪ್ಪಳಕ್ಕೆ ಟಾಟಾ ಏಸ್​​ನಲ್ಲಿ ಬಂದು ಬಳಿಕ ಕೊಪ್ಪಳದಿಂದ‌ ಕುಷ್ಟಗಿಗೆ ಬಸ್​​ನಲ್ಲಿ ಹೋಗಿದ್ದಾನೆ. ಈತ ಪ್ರಯಾಣಿಸಿದ ಬಸ್​​ನ ಪ್ರಯಾಣಿಕರು ಪ್ರಾಥಮಿಕ ಸಂಪರ್ಕಿತರಾಗುತ್ತಾರೆ. ಈ ಪ್ರಯಾಣಿಕರಲ್ಲಿ ಒಂಭತ್ತು ಜನರು ಭಿಕ್ಷುಕರಿದ್ದದ್ದು ಸದ್ಯ ಆತಂಕಕ್ಕೆ ಕಾರಣವಾಗಿದೆ.

ಇನ್ನು P-1174 ಸೋಂಕಿತೆಯೊಂದಿಗೆ 47 ಜನ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ. P-1175 ಸೋಂಕಿತನೊಂದಿಗೆ 50 ಜನ ಪ್ರಾಥಮಿಕ ಸಂಪರ್ಕ ಹಾಗೂ 10 ಜನ ದ್ವೀತಿಯ ಸಂಪರ್ಕ ಹೊಂದಿದ್ದಾರೆ‌. P-1174 ಮತ್ತು P-1175ರನ್ನು ಒಂದೇ ಕಡೆ ಕ್ವಾರಂಟೈನ್‌ ಮಾಡಿರುವುದರಿಂದ ಇಬ್ಬರಿಗೂ 46 ಜನ ಪ್ರಾಥಮಿಕ ಸಂಪರ್ಕ ಹೊಂದಿದವರಿರುತ್ತಾರೆ. ಆದರೆ ವ್ಯಕ್ತಿಗತವಾಗಿ ನೋಡಿದಾಗ ಈ ಇಬ್ಬರ ಪ್ರಾಥಮಿಕ ಸಂಪರ್ಕಿತರ ಸಂಖ್ಯೆ ಬೇರೆ ಬೇರೆಯಾಗುತ್ತದೆ. ಇವರೆಲ್ಲರನ್ನು ಕ್ವಾರಂಟೈನ್ ಮಾಡಲಾಗಿದೆ.

P-1173 ಬಂದಿದ್ದ ಟಾಟಾ ಏಸ್ ಚಾಲಕ ಹಾಗೂ ಇನ್ನೊಬ್ಬ ವ್ಯಕ್ತಿ ಪತ್ತೆಯಾಗ್ತಿಲ್ಲ. ಇವರನ್ನು ಚೆಕ್ ಪೋಸ್ಟ್ ಹಾಗೂ ಸಿ‌ಡಿಆರ್ ಮೂಲಕ ಪತ್ತೆ ಮಾಡುವ ಕೆಲಸ ನಡಿದಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್​ ಕುಮಾರ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.