ETV Bharat / state

ಇನ್ನೂ ಎರಡೂವರೆ ವರ್ಷ ಬಿಎಸ್​ವೈ ಅವರೇ ಸಿಎಂ: ಸಚಿವ ಆನಂದ್​ ಸಿಂಗ್​ - koppala

ಕಾನೂನುಬದ್ಧವಾಗಿ ಸಚಿವ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುತ್ತಿಲ್ಲ. ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಈಗ ನೀತಿ ಸಂಹಿತೆ ಇರುವುದರಿಂದ ತಾಂತ್ರಿಕವಾಗಿ ಮುಂದಕ್ಕೆ ಹೋಗಿರಬಹುದು ಎಂದು ಸಚಿವ ಆನಂದ್​ ಸಿಂಗ್ ಹೇಳಿದ್ದಾರೆ.

koppala
ಸಚಿವ ಆನಂದ ಸಿಂಗ್
author img

By

Published : Dec 1, 2020, 4:54 PM IST

ಕೊಪ್ಪಳ: ಇನ್ನೂ ಎರಡೂವರೆ ವರ್ಷ ಯಡಿಯೂರಪ್ಪ ಅವರೇ ಸಿಎಂ ಆಗಿರ್ತಾರೆ. ಬದಲಾವಣೆ ಏನೂ ಇಲ್ಲ ಎಂದು ಅರಣ್ಯ ಇಲಾಖೆ ಸಚಿವ ಆನಂದ್​ ಸಿಂಗ್ ಹೇಳಿದ್ದಾರೆ.

ಸಚಿವ ಆನಂದ್​ ಸಿಂಗ್

ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಏನೂ ಇಲ್ಲ. ಕಾನೂನುಬದ್ಧವಾಗಿ ಸಚಿವ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುತ್ತಿಲ್ಲ. ಗ್ರಾಮ ಪಂಚಾಯತ್ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಈಗ ನೀತಿ ಸಂಹಿತೆ ಇರುವುದರಿಂದ ತಾಂತ್ರಿಕವಾಗಿ ಮುಂದಕ್ಕೆ ಹೋಗಿರಬಹುದು. ಆದರೆ ಆದಷ್ಟು ಬೇಗನೆ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎಂದು ಹೇಳಿದರು.

ಕೆಲವರು ವೈಯಕ್ತಿಕ ವಿಚಾರಗಳಿಂದಾಗಿ ವಿಜಯನಗರ ಜಿಲ್ಲೆಯಾಗಬಾರದು ಎಂದು ವಿರೋಧ ಮಾಡುತ್ತಿದ್ದಾರೆ. ನಾವು ಅದನ್ನು ಸರಿಪಡಿಸುತ್ತೇವೆ. ಸರ್ಕಾರ ಆಕ್ಷೇಪಣೆಗಳನ್ನು ಸಲ್ಲಿಸಲು ಈಗಾಗಲೇ ಒಂದು ತಿಂಗಳ ಅವಕಾಶ ನೀಡಿದೆ. ವಿಜಯನಗರ ಜಿಲ್ಲೆಗೆ ಸಂಡೂರು ಜನರು ನಾವು ಸೇರುತ್ತೇವೆ ಎಂದಿದ್ದಾರೆ. ಆಕ್ಷೇಪಣೆಗಳನ್ನು ತೆಗೆದುಕೊಂಡು ಸರ್ಕಾರ ತನ್ನ ನಿರ್ಧಾರ ಕೈಗೊಳ್ಳುತ್ತದೆ ಎಂದರು.

ಇನ್ನು ಬಿಜೆಪಿ ಸರ್ಕಾರ ರೈತರ ಪರ ಇರುವ ಸರ್ಕಾರವಾಗಿದೆ. ಪ್ರಚೋದನೆ ನೀಡಿ ದೆಹಲಿಯಲ್ಲಿ ರೈತರು ಹೋರಾಟಕ್ಕೆ ಬರುವಂತೆ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಪರವಾಗಿದ್ದಾರೆ. ವಿರೋಧ ಪಕ್ಷದವರು ಪ್ರಚೋದನೆ ಮಾಡುತ್ತಾರೆ. ಹೀಗಾಗಿ ಯಾರೂ ಸಹ ಆತಂಕಕ್ಕೆ ಒಳಗಾಗಬಾರದು ಎಂದು ಸಚಿವ ಆನಂದ್​​ ಸಿಂಗ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.