ETV Bharat / state

ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆ ನಡೆದಿಲ್ಲ: ಡಿಸಿಎಂ ಲಕ್ಷ್ಮಣ ಸವದಿ - DCM Laxman savadhi Opinion on the Treatment of Black Fungus

ರಾಜ್ಯದಲ್ಲಿ 9 ಲಕ್ಷ ಕಿಲೋ ಮೀಟರ್ ಓಡಿರುವ ಬಸ್​ಗಳನ್ನು ಆಕ್ಸಿಜನ್ ಬಸ್​ಗಳನ್ನಾಗಿ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

DCM Lakshmana Savadi
ಡಿಸಿಎಂ ಲಕ್ಷ್ಮಣ ಸವದಿ
author img

By

Published : May 24, 2021, 4:41 PM IST

Updated : May 24, 2021, 5:37 PM IST

ಕೊಪ್ಪಳ: ರಾಜ್ಯದಲ್ಲಿ ಕೊರೊನಾ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆ ನಡೆದಿಲ್ಲ, ಸಿಎಂ ಖುರ್ಚಿ ಖಾಲಿ ಇಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದವರು ಸಿಎಂ ಆಗ್ತಾರೆ ಎಂಬ ಬಗ್ಗೆ ಚರ್ಚೆ ಬೇಡ. ರಾಜ್ಯದಲ್ಲಿ ಸಿಎಂ ಖುರ್ಚಿ ಖಾಲಿ ಇಲ್ಲ, ಆ ಕುರಿತು ಚರ್ಚೆಯೂ ಬೇಡ ಎಂದರು.

ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿದರು

ರಾಜ್ಯದಲ್ಲಿ 9 ಲಕ್ಷ ಕಿಲೋ ಮೀಟರ್ ಓಡಿರುವ ಬಸ್​ಗಳನ್ನು ಆಕ್ಸಿಜನ್ ಬಸ್​ಗಳನ್ನಾಗಿ ಮಾಡಲಾಗಿದ್ದು, 100 ಬಸ್​ಗಳನ್ನು ಆಕ್ಸಿಜನ್ ಬಸ್ ಮಾಡಲಾಗಿದೆ‌. ಈ ಬಸ್ ಗಳಲ್ಲಿ ಐದು ಬೆಡ್, ಒಂದು ವೆಂಟಿಲೇಟರ್ ಅಳವಡಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಗೊಂದರಂತೆ ಬಸ್ ಮಾಡಲಾಗುವುದು‌. ರಾಜ್ಯದಲ್ಲಿ ಇನ್ನೂ 14 ದಿನ ಲಾಕ್​ಡೌನ್​​ ಅವಧಿಯಿದೆ. ಈಗ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಬ್ಲ್ಯಾಕ್ ಫಂಗಸ್ ಇಂಜೆಕ್ಷನ್ ಸ್ವಲ್ಪ ಕೊರತೆ ಇದೆ. ರಾಜ್ಯದಲ್ಲಿ ಈಗಾಗಲೇ 500 ಬ್ಲಾಕ್ ಫಂಗಸ್ ರೋಗಿಗಳಿದ್ದು, ಆ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು.

ಓದಿ: ಪೊಲೀಸರು, ಆಡಳಿತದ ವಿರುದ್ಧ ಹಿಸಾರ್​ನಲ್ಲಿ ರೈತರ ಪ್ರತಿಭಟನೆ: ಸ್ಥಳದಲ್ಲಿ ಬಿಗಿ ಬಂದೋಬಸ್ತ್​

Last Updated : May 24, 2021, 5:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.