ETV Bharat / state

ರಾಣೆಬೆನ್ನೂರಿನಲ್ಲಿ ಕಳ್ಳತನ: 423 ಗ್ರಾಂ ಬಂಗಾರ, 2.5 ಕೆ.ಜಿ ಬೆಳ್ಳಿ ಹೊತ್ತೊಯ್ದ ಖದೀಮರು! - ರಾಣೆಬೆನ್ನೂರು ಕೊಪ್ಪಳ ಲೇಟೆಸ್ಟ್ ನ್ಯೂಸ್

ಕುಮಾರಪಟ್ಟಣಂ ಪೊಲೀಸ್​ ಠಾಣೆ ವ್ಯಾಪ್ತಿಯ ಬಿರ್ಲಾ ಸ್ಟಾಫ್ ಕಾಲೋನಿಯ ನಾಲ್ಕು ಮನೆಗಳಲ್ಲಿ ಕಳ್ಳತನ ನಡೆದಿದ್ದು, 423 ಗ್ರಾಂ ಬಂಗಾರ, 2.5 ಕೆ.ಜಿ ಬೆಳ್ಳಿಯನ್ನು ಕಳ್ಳರು ಹೊತ್ತೊಯ್ದಿದ್ದಾರೆ.

theft in ranebennuru
ರಾಣೆಬೆನ್ನೂರು ಕಳ್ಳತನ ಪ್ರಕರಣ
author img

By

Published : Jul 20, 2021, 9:40 AM IST

ರಾಣೆಬೆನ್ನೂರು: ತಾಲೂಕಿನ ಕುಮಾರಪಟ್ಟಣಂ ಪೊಲೀಸ್​ ಠಾಣೆ ವ್ಯಾಪ್ತಿಯ ಬಿರ್ಲಾ ಸ್ಟಾಫ್ ಕಾಲೋನಿಯ ನಾಲ್ಕು ಮನೆಗಳಲ್ಲಿ ಕಳವು ಮಾಡಿದ ಘಟನೆ ಜುಲೈ 17, 18 ರಂದು ನಡೆದಿದೆ.

ಬಿರ್ಲಾ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ನಾಗರಾಜ ಎಂ, ನಾಗರಾಜ ಪೂಜಾರ, ವೆಂಕಟೇಶ ರಾವ್​ ಮತ್ತು ಮಂಜುನಾಥ ಒಡೆಯರ್ ಎಂಬುವವರ ಮನೆಗಳನ್ನು ಕಳವು ಮಾಡಲಾಗಿದೆ.

ಜುಲೈ 17 ಮತ್ತು ‌18ರ ಹಗಲಿನ ವೇಳೆ ಕಳ್ಳರು ಬಿರ್ಲಾ ಸ್ಟಾಫ್ ಕಾಲೋನಿಯಲ್ಲಿ ವಾಸ ಮಾಡುತ್ತಿರುವ ಸಿಬ್ಬಂದಿಯ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ. ನಾಗರಾಜ ಎಂ ಎಂಬುವವರು ‌ಮನೆಯಲ್ಲಿದ್ದ 64 ಗ್ರಾಂ ಬಂಗಾರ, 720 ಗ್ರಾಂ ಬೆಳ್ಳಿ, ನಾಗರಾಜ ಪೂಜಾರ ಮನೆಯಲ್ಲಿ 31 ಗ್ರಾಂ ಬಂಗಾರ, 340 ಗ್ರಾಂ ಬೆಳ್ಳಿ, ವೆಂಕಟೇಶ ರಾವ್ ಮನೆಯಲ್ಲಿ 234 ಗ್ರಾಂ ಬಂಗಾರ, 770 ಗ್ರಾಂ ಬೆಳ್ಳಿ, ಮಂಜುನಾಥ ಒಡೆಯರ್ ಮನೆಯಲ್ಲಿ 94 ಗ್ರಾಂ ಬಂಗಾರ, 820 ಗ್ರಾಂ ಬೆಳ್ಳಿ ಕಳವು ಮಾಡಿಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಹಲಗೂರು ರಾಜು ಕೊಲೆ ಪ್ರಕರಣ: ಆರೋಪಿಗಳು ಅಂದರ್​!

ಈ ಕುರಿತು ಕುಮಾರಪಟ್ಟಣಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಳ್ಳರ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.