ETV Bharat / state

ಕೊರೊನಾದಿಂದ ಕಾಪಾಡುವಂತೆ ಊರಮ್ಮನಿಗೆ ಗ್ರಾಮಸ್ಥರಿಂದ ಹೋಳಿಗೆ ನೈವೇದ್ಯ ಸಮರ್ಪಣೆ - The corona epidemic

ವಿಶ್ವಕ್ಕೆ ಕಂಟಕವಾಗಿರುವ ಕೊರೊನಾ ಸಾಂಕ್ರಾಮಿಕ ರೋಗದಿಂದ ತಮ್ಮನ್ನೂ, ತಮ್ಮ ಊರನ್ನೂ ಕಾಪಾಡಮ್ಮ ಎಂದು ಗಂಗಾವತಿ ತಾಲೂಕಿನ ಆನೆಗೊಂದಿ ಜನತೆ ಹರಕೆ ಹೊತ್ತು ದೇವಿಗೆ ಹೋಳಿಗೆಯ ನೈವೇದ್ಯ ಅರ್ಪಿಸಿದರು.

The villagers worshiped godess to save them from the corona
ಕೊರೊನಾದಿಂದ ಕಾಪಾಡುವಂತೆ ಊರಮ್ಮನಿಗೆ ಹರಕೆ ಕಟ್ಟಿಕೊಂಡ ಗ್ರಾಮಸ್ಥರು
author img

By

Published : May 30, 2020, 2:06 PM IST

ಗಂಗಾವತಿ(ಕೊಪ್ಪಳ): ತಾಲೂಕಿನ ಆನೆಗೊಂದಿಯ ಗ್ರಾಮಸ್ಥರು, ವಿಶ್ವಕ್ಕೆ ಕಂಟಕವಾಗಿರುವ ಕೊರೊನಾ ಮಹಮಾರಿಯಿಂದ ತಮ್ಮನ್ನೂ, ತಮ್ಮ ಊರನ್ನೂ ಕಾಪಾಡುವಂತೆ ಹರಕೆ ಹೊತ್ತು ದೇವಿಗೆ ಹೋಳಿಗೆಯ ನೈವೇದ್ಯ ನೆರವೇರಿಸಿದರು.

ಕೊರೊನಾದಿಂದ ಕಾಪಾಡುವಂತೆ ಊರಮ್ಮನಿಗೆ ಹರಕೆ ತೀರಿಸಿದ ಗ್ರಾಮಸ್ಥರು

ಗ್ರಾಮದ ಹೊರ ಭಾಗದಲ್ಲಿ ಅಂದರೆ ಗಂಗಾವತಿ ಮುನಿರಾಬಾದ್ ಮುಖ್ಯ ರಸ್ತೆಯಲ್ಲಿರುವ ದೇಗುಲದಲ್ಲಿ ಗೋಧೂಳಿ ಸಮಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು, ತಮ್ಮನ್ನು ಕೊರೊನಾ ಕಂಟಕದಿಂದ ಕಾಪಾಡುವಂತೆ ಬೇಡಿಕೊಂಡರು. ಕಳೆದ ನಾಲ್ಕು ವಾರಗಳಿಂದ ಪ್ರತಿ ಶುಕ್ರವಾರ ಹಾಗೂ ಮಂಗಳವಾರ ಹೂವು-ಹಣ್ಣು ಅರ್ಪಿಸಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಗ್ರಾಮಸ್ಥರು, ಕೊನೆಯ ಶುಕ್ರವಾರ ಹೋಳಿಗೆ ನೈವೇದ್ಯ ಮಾಡಿ ಹರಕೆ ತೀರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.