ಕೊಪ್ಪಳ: ಮರದಿಂದ ಜಿಗಿಯುವಾಗ ತಾಯಿಯೊಂದಿಗಿದ್ದ ಕೋತಿ ಮರಿಯೊಂದು ವಿದ್ಯುತ್ ಪರಿವರ್ತಕ(ಟ್ರಾನ್ಸ್ಫಾರ್ಮರ್) ಮೇಲೆ ಬಿದ್ದ ಘಟನೆ ಇಲ್ಲಿನ ಸದಾಶಿವ ನಗರದಲ್ಲಿ ನಡೆದಿದೆ.
ಮರದಿಂದ ಮರಕ್ಕೆ ಜಿಗಿಯುವಾಗ ತಾಯಿ ಕೋತಿಯಿಂದ ಮರಿ ಬೇರ್ಪಟ್ಟು ವಿದ್ಯುತ್ ಪರಿವರ್ತಕದ ಮೇಲೆ ಬಿದ್ದ ಪರಿಣಾಮ ತೀವ್ರ ಅಸ್ವಸ್ಥಗೊಂಡಿತ್ತು. ಕೋತಿ ಮರಿ ಕೆಳಗೆ ಬಿದ್ದಿದ್ದನ್ನು ಗಮನಿಸಿದ ಸ್ಥಳೀಯರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಕೋತಿ ಮರಿಗೆ ನೀರು ಕುಡಿಸಿ ಉಪಚರಿಸಿದರು.
ಕೋತಿಮರಿ ಎತ್ತಿಕೊಂಡು ಹೋಗಲು ತಾಯಿ ಕೋತಿ ಈ ಸಂದರ್ಭದಲ್ಲಿ ಹರಸಾಹಸ ಮಾಡಿತು. ಗಾಯಗೊಂಡ ಕೋತಿ ಮರಿಯನ್ನು ಬೇರೆ ರಸ್ತೆಯಲ್ಲಿ ಸ್ಥಳೀಯರು ತಂದು ಹಾಕಿದರು. ಆಗ ತಾಯಿ ಕೋತಿ ತನ್ನ ಮರಿಯನ್ನು ಕರೆದೊಯ್ಯಿತು.