ETV Bharat / state

ಧಾರವಾಡದ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮಹಿಳೆಯ ವರದಿ ನೆಗೆಟಿವ್​ - woman lab report negative

ಧಾರವಾಡದ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮಹಿಳೆಯ ಸ್ಯಾಂಪಲ್​​ ವರದಿ ನೆಗೆಟಿವ್ ಬಂದಿದ್ದು, ಕೊಪ್ಪಳ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

District Collector Sunil Kumar
ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್
author img

By

Published : Apr 16, 2020, 3:50 PM IST

ಕೊಪ್ಪಳ: ನಗರದಲ್ಲಿ ಪ್ರತ್ಯಕ್ಷವಾಗಿ ಆತಂಕಕ್ಕೆ ಕಾರಣವಾಗಿದ್ದ ಧಾರವಾಡದ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮಹಿಳೆಯ ಸ್ಯಾಂಪಲ್​​​ ವರದಿ ನೆಗೆಟಿವ್ ಬಂದಿದ್ದು, ನಗರದದ ಜನತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಈ ಕುರಿತಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮಾಹಿತಿ ನೀಡಿದ್ದು, ಧಾರವಾಡದ ಸೋಂಕಿತ ವ್ಯಕ್ತಿ P-194ರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮಹಿಳೆ ಕೊಪ್ಪಳದಲ್ಲಿ ಏಪ್ರಿಲ್ 13ರಂದು ರಾತ್ರಿ ಜಿಲ್ಲೆಗೆ ಬಂದಿದ್ದರು. ಇದರಿಂದಾಗಿ ಜನರು ತುಂಬಾ ಹೆದರಿದ್ದರು. ಆ ಮಹಿಳೆಯನ್ನು ಐಸೋಲೇಷನ್​​ನಲ್ಲಿಟ್ಟು ನಿನ್ನೆ ಗಂಟಲು ಹಾಗೂ ರಕ್ತದ ಮಾದರಿಯನ್ನು ಲ್ಯಾಬ್​​ಗೆ ಕಳಿಸಲಾಗಿತ್ತು.

ಈಗ ಆ ಮಹಿಳೆಯ ಲ್ಯಾಬ್ ರಿಪೋರ್ಟ್ ನೆಗೆಟಿವ್ ಬಂದಿದೆ. ಆದರೂ ಆ ಮಹಿಳೆಯ ಕ್ವಾರಂಟೈನ್ ಅವಧಿ ಇನ್ನೂ ಇದೆ. ಹೀಗಾಗಿ, ಐಸೋಲೇಷನ್​ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಈ ಮಹಿಳೆ ತಂಗಿದ್ದ ಭಾಗ್ಯ ನಗರದ ವ್ಯಕ್ತಿಯ ಕುಟುಂಬದವರನ್ನು ಸಹ ಕ್ವಾರಂಟೈನ್ ಮಾಡಲಾಗಿದೆ. ಹುಬ್ಬಳ್ಳಿಯಿಂದ ಈ ಮಹಿಳೆಯನ್ನು ಭಾಗ್ಯ ನಗರದ ಗುರುಬಸವ ಹೊಳಗುಂದಿ ಎಂಬ ವ್ಯಕ್ತಿ ಇಲ್ಲಿಗೆ ಕರೆ ತಂದಿದ್ದಾನೆ.

ಇನ್ನು ಮಹಿಳೆ ಮತ್ತು ಆ ವ್ಯಕ್ತಿಯ ಮೇಲೆ ಈಗಾಗಲೇ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಚೆಕ್ ಪೋಸ್ಟ್ ದಾಟಿಕೊಂಡು ಈ ಮಹಿಳೆ ಹೇಗೆ ಬಂದಳು ಎಂಬುದು ಸಹ ಈಗ ಚರ್ಚೆಯಾಗುತ್ತಿದೆ. ಈ ಕುರಿತಂತೆ ನಾವು ಸಮಗ್ರ ತನಿಖೆ ಸಹ ಮಾಡಿಸುತ್ತೇವೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.