ETV Bharat / state

ಇಡೀ ವೀರಶೈವ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕು: ಸಚಿವ ನಿರಾಣಿ - reservation for Veerashaiva Lingayat community

ಕೇವಲ ಪಂಚಮಸಾಲಿ ಸಮುದಾಯವಷ್ಟೇ ಅಲ್ಲದೆ ಇಡೀ ವೀರಶೈವ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕು ಎಂಬುದು ನಮ್ಮ ಅಭಿಪ್ರಾಯ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್​ ನಿರಾಣಿ ಹೇಳಿದ್ದಾರೆ. ಇದೇ ವೇಳೆ ಸರ್ಕಾರಕ್ಕೆ ಬರುವ ಆದಾಯವನ್ನು ತಪ್ಪಿಸಿ ನಂಬರ್ 2 ನಲ್ಲಿ ಮರಳು ಹಾಗೂ ಜಲ್ಲಿ ಕಲ್ಲು ದಂಧೆ‌ ಮಾಡುವುದನ್ನು ತಡೆದು ಸರ್ಕಾರಕ್ಕೆ ಆದಾಯ ತರುವ ನಿಟ್ಟಿನಲ್ಲಿ ಗಣಿ ನೀತಿಯನ್ನು ಸರಳೀಕರಿಸಿ ಹೊಸ ಗಣಿ ನೀತಿಯನ್ನು ಶೀಘ್ರದಲ್ಲಿ ಜಾರಿ ಮಾಡಲಾಗುವುದು ಎಂದು ಅವರು ತಿಳಿಸಿದರು.

murugesh nirani
ಸಚಿವ ಮುರುಗೇಶ್ ನಿರಾಣಿ
author img

By

Published : Feb 27, 2021, 12:56 PM IST

Updated : Feb 27, 2021, 1:03 PM IST

ಕೊಪ್ಪಳ: ವೀರಶೈವ ಲಿಂಗಾಯತದಲ್ಲಿ ಅನೇಕ ಸಮುದಾಯಗಳು ಬರುತ್ತವೆ. ಕೇವಲ ಪಂಚಮಸಾಲಿ ಸಮುದಾಯವಷ್ಟೇ ಅಲ್ಲದೆ ಇಡೀ ವೀರಶೈವ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕು ಎಂಬುದು ನಮ್ಮ ಅಭಿಪ್ರಾಯ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.‌

ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯೆ

ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ವೀರಶೈವ ಲಿಂಗಾಯತದಲ್ಲಿ ಕುಂಬಾರರು, ಹಡಪದರು ಸೇರಿ ಇನ್ನೂ ಅನೇಕ ಸಮುದಾಯಗಳು ಇವೆ. ಆ ಸಣ್ಣ ಸಮುದಾಯಗಳು ಹೋರಾಟ ಮಾಡಿ ಶಕ್ತಿ ಪ್ರದರ್ಶನ ಮಾಡುವಷ್ಟು ಬಲ ಹೊಂದಿಲ್ಲ. ಈ ಸಮುದಾಯವರು ಶಾಸಕರು ಅಥವಾ ಸಂಸದರಾಗಿಲ್ಲ. ಹೀಗಾಗಿ ಅಂತಹ ಸಮುದಾಯಕ್ಕೂ ಸೌಲಭ್ಯ ಸಿಗಬೇಕು. ಹೀಗಾಗಿ ಕೇವಲ ಪಂಚಮಸಾಲಿ ಸಮಾಜಕ್ಕಷ್ಟೇ ಅಲ್ಲದೆ ಇಡೀ ವೀರಶೈವ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕು ಎಂಬುದು ನನ್ನ ಅಭಿಪ್ರಾಯ ಎಂದರು.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರಷ್ಟು ದೊಡ್ಡ ಲೀಡರ್ ನಾನಲ್ಲ, ಅವರು ಬಹಳ ದೊಡ್ಡವರು, ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷರು. ಅವರ ನಾಯಕತ್ವದಲ್ಲಿಯೇ ಹೋರಾಟ ಮಾಡಲಿ, ಸರ್ಕಾರದ ಮಟ್ಟದಲ್ಲಿ ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ರಾಜ್ಯದಲ್ಲಿ ಈಗ ಕೇವಲ ಪಂಚಮಸಾಲಿ ಸಮುದಾಯ ಮಾತ್ರ ಮೀಸಲಾತಿಗೆ ಹೋರಾಟ ಮಾಡುತ್ತಿಲ್ಲ. ಕುರುಬರು, ನಾಯಕರು ಹಾಗೂ ಇತರೆ ಸಮುದಾಯಗಳು ಮೀಸಲಾತಿಗೆ ಹೋರಾಟ ಆರಂಭಿಸಿದ್ದಾರೆ. ಇವರಲ್ಲಿ ಬೇರೆ-ಬೇರೆ ಬೇಡಿಕೆಗಳಿವೆ. ತಮ್ಮ-ತಮ್ಮ ಬೇಡಿಕೆಗಳನ್ನು ಸಿಎಂ ಅವರಿಗೆ ತಿಳಿಸಲಿ. ಈ ಕುರಿತಂತೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಪರಿಶೀಲಿಸಿ ವರದಿ ನೀಡುತ್ತದೆ. ಸಂಪುಟದಲ್ಲಿ ಆಯಾ ಸಮುದಾಯದ ಸಚಿವರಿದ್ದು, ಚರ್ಚಿಸಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ಹೊಸ ಗಣಿ ನೀತಿ:

ಶೀಘ್ರದಲ್ಲಿಯೇ ಹೊಸ ಗಣಿ ನೀತಿ ಜಾರಿಗೆ ತರಲಾಗುತ್ತದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕಡಿಮೆ ದರದಲ್ಲಿ ಮರಳು, ಜಲ್ಲಿ ಸಿಗಬೇಕು. ಆ ನಿಟ್ಟಿನಲ್ಲಿ ಹೊಸ ಗಣಿ ನೀತಿ ರೂಪಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಕ್ವಾರಿ ಮಾಲೀಕರು ಹಾಗೂ ಕೆಲಸಗಾರರಿಗೆ ತರಬೇತಿ:

ಶಿವಮೊಗ್ಗ ಕ್ವಾರಿಯಲ್ಲಿ ನಡೆದ ಜಿಲೆಟಿನ್ ಸ್ಫೋಟ ಪ್ರಕರಣದ ಬಳಿಕ ಕ್ವಾರಿಯಲ್ಲಿ ಸಂಗ್ರಹಿಸಿದ್ದ ಸ್ಫೋಟಕಗಳನ್ನು ಇಲಾಖೆಗೆ ಹಸ್ತಾಂತರಿಸುವಂತೆ ಸೂಚಿಸಲಾಗಿತ್ತು. ಸರಿಯಾದ ತರಬೇತಿ ಇಲ್ಲದೆ ಕ್ವಾರಿಗಳಲ್ಲಿ ಸ್ಫೋಟಕ ಬಳಸುತ್ತಿರುವುದರಿಂದ ಇಂತಹ ದುರಂತಗಳು ನಡೆಯುತ್ತಿವೆ. ಹೀಗಾಗಿ ಕ್ವಾರಿ ಮಾಲೀಕರು ಹಾಗೂ ಕೆಲಸಗಾರರಿಗೆ ಈ ಕುರಿತು ಮೂರರಿಂದ ಏಳು ದಿನಗಳ ಕಾಲ ತರಬೇತಿ ನೀಡಲು ಇಲಾಖೆ ಮುಂದಾಗಿದೆ. ಅಕ್ರಮವಾಗಿ ಸ್ಫೋಟಕ ಪೂರೈಸಿದ ಹಾಗೂ ಟ್ರಾನ್ಸ್​ಪೋರ್ಟ್ ಮಾಡಿದವರನ್ನು ಪತ್ತೆ ಮಾಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಓದಿ: ಸಮಿತಿ ವರದಿ ಬಂದ ನಂತರ ಮೀಸಲಾತಿ ತೀರ್ಮಾನ: ಸಚಿವ ಮುರುಗೇಶ್ ನಿರಾಣಿ

ಮರಳು ಹಾಗೂ ಜಲ್ಲಿ ಕಲ್ಲು ಇಲ್ಲದೆ ಅಭಿವೃದ್ಧಿ ಕೆಲಸಗಳನ್ನು ಮಾಡಲು ಆಗುವುದಿಲ್ಲ. ಮರಳು, ಜಲ್ಲಿ ಕ್ರಶರ್ ಬಂದ್‌ ಮಾಡಿದರೆ ಅಭಿವೃದ್ಧಿ ಕೆಲಸಗಳು ನಿಂತು ಹೋಗುತ್ತವೆ. ಸರ್ಕಾರಕ್ಕೆ ಬರುವ ಆದಾಯವನ್ನು ತಪ್ಪಿಸಿ ನಂಬರ್ 2 ನಲ್ಲಿ ಮರಳು ಹಾಗೂ ಜಲ್ಲಿ ಕಲ್ಲು ದಂಧೆ‌ ಮಾಡುವುದನ್ನು ತಡೆದು ಸರ್ಕಾರಕ್ಕೆ ಆದಾಯ ತರುವ ನಿಟ್ಟಿನಲ್ಲಿ ಗಣಿ ನೀತಿಯನ್ನು ಸರಳೀಕರಿಸಿ ಹೊಸ ಗಣಿ ನೀತಿಯನ್ನು ಶೀಘ್ರದಲ್ಲಿ ಜಾರಿ ಮಾಡಲಾಗುವುದು ಎಂದು ಸಚಿವ ನಿರಾಣಿ ವಿವರಿಸಿದರು.

Last Updated : Feb 27, 2021, 1:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.