ಗಂಗಾವತಿ : ತಾಲೂಕಿನ ಪ್ರಮುಖ ಧಾರ್ಮಿಕ ತಾಣ ಅಂಜನಾದ್ರಿಯ ಆಂಜನೇಯ ದೇಗುಲಕ್ಕೆ ಇಂಗ್ಲೆಂಡ್ ರಾಯಭಾರಿ ತಮ್ಮ ಪತ್ನಿ ಸಮೇತ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಮುಂಬೈನಲ್ಲಿರುವ ಬ್ರಿಟಿಷ್ ಸರ್ಕಾರದ ಡೆಪ್ಯುಟಿ ಕಮೀಷನರ್ ಅಲೆನ್ ಗಿಮೆಲ್ ಹಾಗೂ ಅವರ ಪತ್ನಿ ಅಂಜನಾದ್ರಿಯ ಆಂಜನೇಯನ ದರ್ಶನ ಪಡೆದಿದ್ದಾರೆ. ಹರಿ ಎಂಬುವವರು ಇಂಗ್ಲೆಂಡ್ ನ ದಂಪತಿಯನ್ನು ದೇಗುಲಕ್ಕೆ ಕರೆತಂದು ದರ್ಶನ ಮಾಡಿಸಿದ್ದಾರೆ.
ಇದಕ್ಕೂ ಮುನ್ನ ಹುಬ್ಬಳ್ಳಿ ಸಮೀಪ ಇರುವ ಗರಗದ ರಾಷ್ಟ್ರ ಧ್ವಜ ತಯಾರಿಸುವ ಘಟಕಕ್ಕೆ ರಾಯಭಾರಿ ಭೇಟಿ ನೀಡಿದ್ದರು. ಹೊಸಪೇಟೆ ಮತ್ತು ಜಿಂದಾಲ್ ನಲ್ಲಿರುವ ಮಹಿಳಾ ಸ್ವಸಹಾಯ ಸಂಘ ಮತ್ತು ಸಹಕಾರ ಸಂಘಗಳ ಕಾರ್ಯಚಟುವಟಿಕೆಗಳನ್ನು ಅಧ್ಯಯನ ಮಾಡುವ ಉದ್ದೇಶದಿಂದ ಬಂದಿರುವುದಾಗಿ ಹೇಳಿದ್ದಾರೆ.
ಓದಿ : ಚಿಕ್ಕೋಡಿಯಲ್ಲಿ ಪಾಕಿಸ್ತಾನದ ನೋಟು ಪತ್ತೆ; ತನಿಖೆ ಆರಂಭಿಸಿದ ಪೊಲೀಸರು