ETV Bharat / state

ಅಂಜನಾದ್ರಿ ಬೆಟ್ಟಕ್ಕೆ ದಿಢೀರ್​ ಭೇಟಿ ನೀಡಿದ ತೆಲಂಗಾಣ ಶಾಸಕ ರಾಜಾ ಸಿಂಗ್​​​

ವಿವಾದಾತ್ಮಕ ಹೇಳಿಕೆ ಮೂಲಕವೇ ಚಿರಪರಿಚಿತರಾಗಿರುವ ಶಾಸಕ ರಾಜಾ ಸಿಂಗ್​ ಮೇಲೆ ಕೋಮುಭಾವನೆ ಕೆರಳಿಸಿದ ಆರೋಪದ ಮೇಲೆ 100ಕ್ಕೂ ಹೆಚ್ಚು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.

ನಿಗದಿತ ಪ್ರವಾಸ ಬದಲಾಯಿಸಿ, ಅಂಜನಾದ್ರಿ ಬೆಟ್ಟಕ್ಕೆ ದಿಢೀರ್​ ಭೇಟಿ ನೀಡಿದ ತೆಲಂಗಾಣ ಶಾಸಕ ರಾಜಾ ಸಿಂಗ್​​​
telangana-mla-raja-singh-made-a-surprise-visit-to-anjanadri-hill-after-changing-the-scheduled-trip
author img

By

Published : Nov 23, 2022, 1:18 PM IST

ಗಂಗಾವತಿ: ತೆಲಂಗಾಣದ ಘೋಶಾಮಾಲ್ ವಿಧಾನಸಭೆ​ ಕ್ಷೇತ್ರದ ಬಿಜೆಪಿ ಶಾಸಕ ರಾಜಾ ಸಿಂಗ್​ ಲೋದ ಅವರು ತಮ್ಮ ನಿಗದಿತ ಪ್ರವಾಸದ ವೇಳಾಪಟ್ಟಿ ಬದಲಾಯಿಸಿ, ಅಂಜನಾದ್ರಿ ಬೆಟ್ಟಕ್ಕೆ ಬುಧವಾರ ಬೆಳಗ್ಗೆ ದಿಢೀರ್ ಭೇಟಿ ಕೊಟ್ಟರು.

ನಿಗದಿತ ಪ್ರವಾಸ ಬದಲಾಯಿಸಿ, ಅಂಜನಾದ್ರಿ ಬೆಟ್ಟಕ್ಕೆ ದಿಢೀರ್​ ಭೇಟಿ ನೀಡಿದ ತೆಲಂಗಾಣ ಶಾಸಕ ರಾಜಾ ಸಿಂಗ್​​​
ಅಂಜನಾದ್ರಿ ಬೆಟ್ಟಕ್ಕೆ ದಿಢೀರ್​ ಭೇಟಿ ನೀಡಿದ ತೆಲಂಗಾಣ ಶಾಸಕ ರಾಜಾ ಸಿಂಗ್​​​

ಇದಕ್ಕೂ ಮೊದಲು, ಮಂಗಳವಾರ ಸಂಜೆಯೇ ದೇಗುಲಕ್ಕೆ ಆಗಮಿಸುತ್ತಾರೆ ಎಂದು ತಿಳಿಸಲಾಗಿತ್ತು. ಆದರೆ, ಈ ಪ್ರವಾಸದಲ್ಲಿ ಬದಲಾವಣೆ ಮಾಡಿಕೊಂಡಿರುವ ಶಾಸಕರು ಮಂಗಳವಾರ ಸಂಜೆ ಹೊಸಪೇಟೆಗೆ ತೆರಳಿ ತಂಗಿದ್ದು, ಬುಧವಾರ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಿದ್ದಾರೆ. ತಮ್ಮ ಖಾಸಗಿ ಭದ್ರತಾ ಪಡೆ ಮತ್ತು ಅಂಗರಕ್ಷಕರ ಜೊತೆ ಬೆಟ್ಟ ಏರಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪಂಪಾಸರೋವರಕ್ಕೂ ಭೇಟಿ ನೀಡಿದರು. ದೇವಸ್ಥಾನದ ಆಡಳಿತ ಮಂಡಳಿಯಿಂದ ಶಾಸಕ ರಾಜಾಸಿಂಗ್ ಅವರನ್ನು ಸನ್ಮಾನಿಸಿ ಗೌರವಿಸಲಾಗಿದೆ.

ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಚಿರಪರಿಚಿತರಾಗಿರುವ ರಾಜಾ ಸಿಂಗ್​ ಮೇಲೆ ಕೋಮುಭಾವನೆ ಕೆರಳಿಸಿದ ಆರೋಪದ ಮೇಲೆ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ವೈ ಶ್ರೇಣಿಯ ಜೊತೆಗೆ ಹೆಚ್ಚುವರಿ ಭದ್ರತೆ ಕಲ್ಪಿಸುವಂತೆ ತೆಲಂಗಾಣದ ಎಡಿಜಿಪಿ ಕೊಪ್ಪಳ ಪೊಲೀಸರಿಗೆ ಮನವಿ ಮಾಡಿದ್ದರು.

ಇದನ್ನೂ ಓದಿ: ತರಕಾರಿ ಖರೀದಿಗೆ ಹೋಗಿದ್ದ ಮಾಜಿ ಸಚಿವರ ಪುತ್ರಿಯ ಅಪಹರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.