ಕೊಪ್ಪಳ: ಜಿಲ್ಲೆಯ ನೂತನ ಕಾರಟಗಿ ತಾಲೂಕು ಪಂಚಾಯತ್ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಪ್ರಕಾಶ ಭಾವಿ ಹಾಗೂ ಉಪಾಧ್ಯಕ್ಷರಾಗಿ ಶೋಭಾ ಬಸವರಾಜ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
10 ಜನ ಸದಸ್ಯ ಬಲದ ಕಾರಟಗಿ ತಾಲೂಕು ಪಂಚಾಯತ್ನಲ್ಲಿ 8 ಜನ ಕಾಂಗ್ರೆಸ್ ಹಾಗೂ ಇಬ್ಬರು ಬಿಜೆಪಿ ಸದಸ್ಯರು ಇದ್ದಾರೆ. ಇಬ್ಬರು ಬಿಜೆಪಿ ಸದಸ್ಯರಲ್ಲಿ ಸಾಲುಂಚಿಮರ ತಾಪಂ ಕ್ಷೇತ್ರದ ಸದಸ್ಯರ ನಿಧನದಿಂದ ಬಿಜೆಪಿಯಲ್ಲಿ ಒಬ್ಬರೇ ಸದಸ್ಯರು ಉಳಿದಿದ್ದಾರೆ. ಗಂಗಾವತಿ ತಾಲೂಕು ವಿಂಗಡಣೆಯಾಗಿ ಕಾರಟಗಿ ನೂತನ ತಾಲೂಕು ಪಂಚಾಯತ್ ಆದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿಯೇ ಕಾಂಗ್ರೆಸ್ ಹಿಡಿತ ಸಾಧಿಸಿದಂತಾಗಿದೆ.
ಇದನ್ನೂ ಓದಿ: 'ಸ್ವಚ್ಛ ಸರ್ವೇಕ್ಷಣ್ 2020' ಅಭಿಯಾನ... ರಾಜ್ಯದಲ್ಲಿ ಮೈಸೂರು ಪ್ರಥಮ, ತುಮಕೂರಿಗೆ 2ನೇ ಸ್ಥಾನ!
ಈ ಮೊದಲು ಕಾರಟಗಿ ತಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಆದರೆ ಮೀಸಲಾತಿ ಬದಲಾವಣೆಗಾಗಿ ಬೇವಿನಾಳ ತಾಪಂ ಕ್ಷೇತ್ರದ ಸದಸ್ಯ ದಾನನಗೌಡ ಎಂಬುವವರು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಬಳಿಕ ಸಾಮಾನ್ಯ ಮಹಿಳೆ ಮೀಸಲಾತಿ ಬದಲಾಗಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಕಲ್ಪಿಸಿದ್ದರಿಂದ ಪ್ರಕಾಶ್ ಭಾವಿಗೆ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ.