ಗಂಗಾವತಿ : ಅನಕ್ಷರಸ್ಥರು ಹಾಗೂ ಕೂಲಿ ಕಾರ್ಮಿಕರೇ ಹೆಚ್ಚಿರುವ ಗಂಗಾವತಿ ಸಮೀಪದ ಸೂರ್ಯನಾಯಕ ತಾಂಡಕ್ಕೆ ಭೇಟಿ ನೀಡಿದ ತಾಲೂಕು ಪಂಚಾಯತ್ ಅಧಿಕಾರಿ ಡಾ.ಡಿ ಮೋಹನ್, ಅಲ್ಲಿನ ಜನರಿಗೆ ಲಂಬಾಣಿ ಭಾಷೆಯಲ್ಲಿಯೇ ಕೊರೊನಾ ಜಾಗೃತಿ ಮೂಡಿಸಿದರು.
ಮೂಲಸೌಕರ್ಯಗಳಿಂದ ವಂಚಿತವಾಗಿರುವ ಗಂಗಾವತಿಯಿಂದ ಐದಾರು ಕಿ.ಮೀ ದೂರುದಲ್ಲಿರುವ ಸೂರ್ಯನಾಯಕ ತಾಂಡದಲ್ಲಿ ದೈನಂದಿನ ಕೂಲಿ ನಂಬಿ ಜೀವನ ಸಾಗಿಸುತ್ತಿರುವವರ ಸಂಖ್ಯೆಯೇ ಹೆಚ್ಚಿದೆ.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಇಒ ಮೋಹನ್, ರಾಜ್ಯ ಮತ್ತು ಜಿಲ್ಲೆಯಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ ಮನೆಯಲ್ಲಿಯೇ ಸುರಕ್ಷಿತವಾಗಿ ಇರಿ. ನಿಮ್ಮೂರಿನಲ್ಲಿಯೇ ಕೆಲಸ ಕೊಡಿಸಲಾಗುವುದು ಎಂದರು.
ಅನಗತ್ಯವಾಗಿ ಊರೂರು ಅಲೆಯುವುದು, ಸೋಂಕಿತರ ಸಂಪರ್ಕಕ್ಕೆ ಬಂದು ಬಳಿಕ ಇತರರಿಗೆ ಹರಡುವಂತ ಕೆಲಸಕ್ಕೆ ಕೈಹಾಕಬೇಡಿ. ನರೇಗಾದಲ್ಲಿ ನಿಮ್ಮೂರಿನಲ್ಲಿಯೇ ಕೆಲಸ ಕೊಡಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.
ಓದಿ: ವ್ಯಾಕ್ಸಿನ್ ಲಭ್ಯತೆ ಇಲ್ಲ.. ದಾಸ್ತಾನು ಇಂದಿಗೆ ಮುಗಿಯಲಿದೆ : ಗೌರವ್ ಗುಪ್ತ