ಗಂಗಾವತಿ : ಇರುವ ಅಲ್ಪ ಕಾಲದ ಅಧಿಕಾರವಧಿಯಲ್ಲಿ ಬೇರೆ ಏನೇ ಸುಧಾರಣೆ ಮಾಡಲಾಗದಿದ್ದರೂ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಸುಧಾರಣೆಗೆ ಪ್ರಮಾಣಿಕ ಪ್ರಯತ್ನಮಾಡುವುದಾಗಿ ತಾಲೂಕು ಪಂಚಾಯಿತಿ ನೂತನ ಅಧ್ಯಕ್ಷ ಮೊಹಮ್ಮದ್ ರಫಿ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ನಡೆದ ತಾಲೂಕು ಪಂಚಾಯಿತಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ತಾ.ಪಂ.ನ ಐದು ವರ್ಷದ ಅಧಿಕಾರ ಅವಧಿಯ ಕೊನೆಯ ಒಂದು ವರ್ಷದ ಮಾತ್ರ ತಮಗೆ ಸಿಕ್ಕಿದೆ. ಇರುವ ಅನುದಾನ ಸೀಮಿತ ಆಡಳಿತ ಅವಧಿ ಹಾಗೂ ಅಧಿಕಾರ ವ್ಯಾಪ್ತಿಯಲ್ಲಿ ಮುಖ್ಯವಾಗಿ, ಶಿಶು ಹಂತದಿಂದ ಪದವಿವರೆಗಿನ ಶಿಕ್ಷಣ, ಆರೋಗ್ಯ ಮತ್ತು ಪರಿಸರ ಕ್ಷೇತ್ರದ ಅಭಿವೃದ್ಧಿಗೆ ಒತ್ತು ಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ನಾನಾ ಸಂಘಟನೆ ಮತ್ತು ಸಮುದಾಯಗಳ ಮುಖಂಡರು ನೂತನ ಅಧ್ಯಕ್ಷರಿಗೆ ಅಭಿನಂದಿಸಿದರು. ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಗೀತಾ, ಇಒ ಡಾ. ಡಿ. ಮೋಹನ್ ಇದ್ದರು.