ಕುಷ್ಟಗಿ (ಕೊಪ್ಪಳ): ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಕೊರತೆ ಆಗದಂತೆ ತಹಶೀಲ್ದಾರ್ ಎಂ.ಸಿದ್ದೇಶ್ ಕಾರ್ಖಾನೆಗಳಲ್ಲಿ ಬಳಕೆಯಲ್ಲಿ ಇಲ್ಲದ 10 ಆಕ್ಸಿಜನ್ ಜಂಬೋ ಸಿಲಿಂಡರ್ ಪತ್ತೆ ಹಚ್ಚಿದ್ದಾರೆ. ಈ ಬಳಿಕ ಕುಷ್ಟಗಿಯ ಡೆಡಿಕೇಟೆಡ್ ಕೋವಿಡ್ ಹೆಲ್ಥ್ ಕೇರ್ ಸೆಂಟರ್ (ಡಿಸಿಎಚ್ಸಿ)ಗೆ ನೀಡಿದ್ದಾರೆ.
ಸದ್ಯ ಡಿಸಿಎಚ್ಸಿಯಲ್ಲಿ 120 ಜಂಬೋ ಸಿಲಿಂಡರ್ ನಿರ್ವಹಣೆಯಲ್ಲಿದೆ. ಇನ್ನಷ್ಟು ಆಕ್ಸಿಜನ್ ಅಗತ್ಯವಿರುವ ಹಿನ್ನೆಲೆಯಲ್ಲಿ ಇಲ್ಲಿನ ಕೆಐಡಿಬಿಯ ಗ್ರಾನೈಟ್ ಕಾರ್ಖಾನೆಯಲ್ಲಿ ಹಾಗೂ ವೆಲ್ಡಿಂಗ್ ಶಾಪ್ನಲ್ಲಿನ ಆಕ್ಸಿಜನ್ ಸಿಲಿಂಡರ್ಗಳನ್ನು ಪಡೆದಿದ್ದಾರೆ.
ಈ ಕುರಿತು ಮಾತನಾಡಿದ ತಹಶೀಲ್ದಾರ್, ಸಂಪೂರ್ಣ ಲಾ್ಕಡೌನ್ ಸಂದರ್ಭದಲ್ಲಿ ಗ್ರಾನೈಟ್ ಕಾರ್ಖನೆ ಹಾಗೂ ವೆಲ್ಡಿಂಗ್ ಶಾಪ್ ಬಂದ್ ಆಗಿದ್ದು, ಆಕ್ಸಿಜನ್ ಜಂಬೋ ಸಿಲಿಂಡರ್ ಬಳಕೆಯಲ್ಲಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಜಂಬೋ ಅಕ್ಸಿಜನ್ ಸಿಲಿಂಡರ್ಗಳು ಡಿಸಿಎಚ್ಸಿಗೆ ಅವಶ್ಯಕತೆ ಇರುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ 10 ಜಂಬೋ ಆಕ್ಸಿಜನ್ ಸಿಲಿಂಡರ್ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.