ಗಂಗಾವತಿ: ಲಾಕ್ ಡೌ್ನ್ ಹಿನ್ನೆಲೆ ಎಲ್ಲಾ ದೇಗುಲಗಳನ್ನು ಬಂದ್ ಮಾಡಲಾಗಿದ್ದು, ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಕೋತಿಗಳಿಗೆ ವಿಶೇಷ ಆಹಾರದ ವ್ಯವಸ್ಥೆ ಮಾಡಿ ಸಾಂಕೇತಿಕವಾಗಿ ಹನುಮ ಜಯಂತಿ ಆಚರಿಸಲಾಯಿತು.
ಕೊರೊನಾದ ಭೀತಿಯಿಂದಾಗಿ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಸ್ಥಗಿತವಾಗಿದ್ದರಿಂದ, ಬೆಟ್ಟದಲ್ಲಿ ವಾಸಿಸುವ ಕೋತಿಗಳು ಆಹಾರವಿಲ್ಲದೆ ಪರದಾಡುತ್ತಿದ್ದವು.
ಹನುಮ ಜಯಂತಿ ಅಂಗವಾಗಿ ಕೋತಿಗಳಿಗೆ ಶೇಂಗಾಕಾಳು, ನೆನೆಸಿದ ಕಡಲೆಕಾಳು, ಬಾಳೆಹಣ್ಣು, ದ್ರಾಕ್ಷಿ, ಕಲ್ಲಂಗಡಿ ಹಣ್ಣು ನೀಡಲಾಯಿತು. ಕೆಲ ಭಕ್ತರು ವಿಶೇಷ ಆಹಾರ ತಂದು ನೀಡುತ್ತಿದ್ದ ದೃಶ್ಯ ಕಂಡು ಬಂತು.