ಗಂಗಾವತಿ: ನಾನಾ ಕಾರಣಕ್ಕೆ ಇಲ್ಲಿನ ಉಪ ವಿಭಾಗ ಆಸ್ಪತ್ರೆಯಲ್ಲಿ ಒಳ ರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ದಸರಾ ಹಬ್ಬದ ಅಂಗವಾಗಿ ಅಡುಗೆ ಗುತ್ತಿಗೆದಾರರೊಬ್ಬರು ಹೋಳಿಗೆ ಸಿಹಿ ಊಟ ಉಣಬಡಿಸಿ ಗಮನ ಸೆಳೆದಿದ್ದಾರೆ.
ಈಗಾಗಲೇ ನಾನಾ ಚಿಕಿತ್ಸೆ ಹಾಗೂ ಗುಣಮಟ್ಟದ ಸೇವಾ ಸೌಲಭ್ಯಕ್ಕೆ ರಾಜ್ಯಮಟ್ಟದಲ್ಲಿ ಗಮನ ಸೆಳೆದಿರುವ ಇಲ್ಲಿನ ಉಪವಿಭಾಗ ಆಸ್ಪತ್ರೆಯಲ್ಲಿ ಇದೀಗ ರೋಗಿಗಳಿಗೆ ನಿತ್ಯ ಶುಚಿ ರುಚಿಯಾದ ಆಹಾರ ನೀಡುವ ಮೂಲಕ ಮತ್ತೊಮ್ಮೆ ಆಸ್ಪತ್ರೆ ಗಮನ ಸೆಳೆಯುತ್ತಿದೆ.
ಮನೆಯಲ್ಲಿದ್ದರೆ ಸಿಹಿ ಅಡುಗೆ ಮಾಡಿಕೊಂಡು ಊಟ ಮಾಡಬಹುದಿತ್ತು ಎಂಬ ಭಾವನೆ ರೋಗಿಗಳಲ್ಲಿ ಬರಬಾರದು ಎಂಬ ಕಾರಣಕ್ಕೆ ಈ ವ್ಯವಸ್ಥೆ ಮಾಡಿದ್ದೇವೆ ಎಂದು ಆಸ್ಪತ್ರೆಯ ಸಿಬ್ಬಂದಿ ಹಾಗೂ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.