ಗಂಗಾವತಿ: ಹೋಟೆಲ್ ಒಂದರಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಕೆಲಸ ಮುಗಿಸಿ ಫುಟ್ಪಾತ್ ಮೇಲೆ ನಡೆದುಕೊಂಡು ಮನೆಗೆ ಹಿಂತಿರುಗುತ್ತಿರುವ ಸಂದರ್ಭದಲ್ಲಿ ಆಕೆಯ ಮೇಲೆ ಕಬ್ಬಿನ ಟ್ರ್ಯಾಕ್ಟರ್ ಉರುಳಿ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಸಂಭವಿಸಿದೆ.
ಮೃತ ಮಹಿಳೆಯನ್ನು ಲಿಂಗರಾಜಕ್ಯಾಂಪಿನ ಮುಮ್ತಾಜ್ಬೇಗಂ (36) ಎಂದು ಗುರುತಿಸಲಾಗಿದೆ. ಮಹಿಳೆ ರಾಣಿಚನ್ನಮ್ಮ ವೃತ್ತದಲ್ಲಿರುವ ಅನ್ನಪೂಣೇಶ್ವರಿ ಎಂಬ ಹೋಟೆಲ್ನಲ್ಲಿ ಸಂಜೆಯ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿರುವ ಈ ದುರ್ಘಟನೆ ನಡೆದಿದೆ.
ಸಿಬಿಎಸ್ ವೃತ್ತದಿಂದ ರಾಣಾಪ್ರತಾಪ್ ಸಿಂಗ್ ವೃತ್ತದ ಮಾರ್ಗವಾಗಿ ಕಬ್ಬಿನ ಲೋಡ್ ತುಂಬಿಕೊಂಡು ಹೊರಟ್ಟಿದ್ದ ಟ್ರ್ಯಾಕ್ಟರಿಗೆ ದಿಢೀರ್ರಾಗಿ ಕಾರೊಂದು ಅಡ್ಡ ಬಂದಿದೆ. ಕಾರು - ಟ್ರ್ಯಾಕ್ಟರ್ನ ಸಂಭವನೀಯ ಅಪಘಾತ ತಪ್ಪಿಸಲು ಟ್ರ್ಯಾಕ್ಟರ್ ಚಾಲಕ ವಾಹನವನ್ನು ಫುಟ್ಪಾತ್ ಮೇಲೆ ಓಡಿಸಿದಾಗ ಈ ಘಟನೆ ನಡೆದಿದೆ.
ಘಟನೆ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ನವ ವಿವಾಹಿತ ಸಾವು