ETV Bharat / state

ಶಾಲೆಗೆ ತೆರಳಲು ಜೆಸಿಬಿ ಬಕೆಟ್ ಏರಿದ ವಿದ್ಯಾರ್ಥಿಗಳು - ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಗ್ರಾಮ

ವಿದ್ಯಾರ್ಥಿಗಳು ಜೆಸಿಬಿಯ ಮುಂದಿನ ಬಕೆಟ್​​ನಲ್ಲಿ ನಿಂತು ಶಾಲೆಗೆ ತೆರಳಿದ ಘಟನೆ ಕೊಪ್ಪಳ ತಾಲೂಕಿನಲ್ಲಿ ನಡೆದಿದೆ.

students-went-to-school-in-jcb-bucket
ಶಾಲೆಗೆ ತೆರಳಲು ಜೆಸಿಬಿ ಬಕೆಟ್ ಏರಿದ ವಿದ್ಯಾರ್ಥಿಗಳು
author img

By

Published : Sep 1, 2021, 10:25 AM IST

ಕೊಪ್ಪಳ: ಶಾಲೆಗೆ ಹೋಗಲು ಬಸ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಜೆಸಿಬಿಯ ಮುಂದಿನ ಬಕೆಟ್​​ನಲ್ಲಿ ನಿಂತು ಹೋಗಿದ್ದಾರೆ. ಈ ಘಟನೆ ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ನಡೆದಿದೆ.

9 ಮತ್ತು 10ನೇ ತರಗತಿಯ ಶಾಲೆಗಳು ಆರಂಭವಾಗಿವೆ. ಮುದ್ದಾಬಳ್ಳಿಯ ವಿದ್ಯಾರ್ಥಿಗಳು 5 ಕಿಲೋಮೀಟರ್ ದೂರದ ಹ್ಯಾಟಿ ಗ್ರಾಮದಲ್ಲಿರುವ ಶಾಲೆಗೆ ಹೋಗುತ್ತಾರೆ. ಶಾಲೆಗೆ ಹೋಗಲು ಬಸ್ ವ್ಯವಸ್ಥೆ ಇಲ್ಲದ ಕಾರಣ ಟಂಟಂ ಅಥವಾ ಇನ್ಯಾವುದೋ ವಾಹನದ‌ ಮೂಲಕ ಇಲ್ಲವೇ ನಡೆದುಕೊಂಡೇ ಶಾಲೆಗೆ ತೆರಳಬೇಕು.

Students went to school in JCB bucket
ವೈರಲ್​ ಫೋಟೋ

ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಜೆಸಿಬಿ ಚಾಲಕ ಜೆಸಿಬಿ ಬಕೆಟ್ ನಲ್ಲಿ ನಿಲ್ಲಿಸಿಕೊಂಡು ಶಾಲೆ ತಲುಪಿಸಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿಗಳು ಜೆಸಿಬಿ ಬಕೆಟ್ ನಲ್ಲಿ ಹೋಗುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿವೆ.

ಇದನ್ನೂ ಓದಿ: ಟೋಕಿಯೋ ಪ್ಯಾರಾಲಿಂಪಿಕ್ಸ್: ಮತ್ತೊಂದು ಪದಕ ಮುಡಿಗೇರಿಸಿಕೊಳ್ಳುವಲ್ಲಿ ವಿಫಲರಾದ ಅವನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.