ETV Bharat / state

ರವಿ ಡಿ ಚನ್ನಣ್ಣವರ್​ ಕಾರ್ಯಕ್ರಮದಲ್ಲಿ ಸೆಲ್ಫಿಗಾಗಿ ಮುಗಿಬಿದ್ದ ವಿದ್ಯಾರ್ಥಿಗಳು

ಗಂಗಾವತಿ ನಗರದಲ್ಲಿ ಆಯೋಜನೆಗೊಂಡಿದ್ದ ಐಪಿಎಸ್​ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಅವರ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಆಗಮಿಸಿದ್ದು, ಸೆಲ್ಫಿಗಾಗಿ ಮುಗಿಬಿದ್ದ ಘಟನೆ ನಡೆಯಿತು.

students rushed to ravi-d-channannavar programme
ರವಿ ಡಿ ಚನ್ನಣ್ಣವರ್​ ಕಾರ್ಯಕ್ರಮ
author img

By

Published : Oct 24, 2021, 8:33 PM IST

ಗಂಗಾವತಿ: ಐಪಿಎಸ್ ಅಧಿಕಾರಿ ಹಾಗೂ ಬೆಂಗಳೂರು ಗ್ರಾಮೀಣ ಎಸ್​ಪಿ ರವಿ ಡಿ. ಚನ್ನಣ್ಣನವರ್ ಅವರನ್ನು ನೋಡಲು ಹಾಗೂ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ನೂರಾರು ವಿದ್ಯಾರ್ಥಿಗಳು ಮುಗಿಬಿದ್ದ ಘಟನೆ ನಗರದಲ್ಲಿ ನಡೆಯಿತು.

ನಗರದ ಚನ್ನಬಸವ ಸ್ವಾಮಿ ಕಲಾ ಮಂದಿರದಲ್ಲಿ ಚನ್ನಣ್ಣವರ್ ಅಭಿಮಾನಿ ಬಳಗ ಹಾಗೂ ಎಸ್ಎಫ್ಐ ಸಂಘಟನೆಯ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯ ಮಾತುಗಳ್ನು ಆಲಿಸಲು ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಸೇರಿದ್ದರು.ಪರಿಣಾಮ ಕೇವಲ 200 ಜನರ ಸಾಮರ್ಥ್ಯದ ಕಲಾ ಮಂದಿರದಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಗಣ್ಯರು ಸೇರಿದ್ರು. ಪರಿಣಾಮ ಕೂರಲು, ನಿಲ್ಲಲು ಸ್ಥಳಾವಕಾಶವಿಲ್ಲದಂತಾಗಿ ಯುವಕರು ವೇದಿಕೆಯತ್ತ ನುಗ್ಗಿದರು.

ಸಂಘಟಕರು ಎಷ್ಟೇ ಮನವಿ ಮಾಡಿದರೂ ಯುವಕರು, ಪೊಲೀಸ್ ಅಧಿಕಾರಿ ರವಿ ಚನ್ನಣ್ಣನವರ್ ಅವರ ಸ್ಫೂರ್ತಿದಾಯಕ ಮಾತುಗಳನ್ನು ಆಲಿಸಲು ಹಾಗೂ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

ಕಿವಿಗಡಚಿಕ್ಕುವ ಕೇಕೆ, ಶಿಳ್ಳೆ, ಕೇಳಿ ಬಂದವು. ಸ್ವತಃ ಚನ್ನಣ್ಣನವರ್ ಮನವಿಗೂ ವಿದ್ಯಾರ್ಥಿಗಳು ಮಣಿಯಲಿಲ್ಲ. ಕೊನೆಗೆ ರವಿ ಚನ್ನಣ್ಣನವರ್ ಯುವಕರನ್ನು ಉದ್ದೇಶಿಸಿ ಸ್ಫೂರ್ತಿದಾಯಕ ಭಾಷಣ ಮಾಡಿದರು. ಸ್ಫರ್ಧಾತ್ಮಕ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿದರು.

ಇದನ್ನೂ ಓದಿ:ಅಂಜನಾದ್ರಿಯಲ್ಲಿ ಐಪಿಎಸ್​ ಅಧಿಕಾರಿ ರವಿ ಚನ್ನಣ್ಣನವರ್... ವಿಶೇಷ ಪೂಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.