ಕೊಪ್ಪಳ: ನಗರದ ತಾಲೂಕು ಕ್ರೀಡಾಂಗಣದಲ್ಲಿ ಇದೇ ಜನವರಿ 5 ರಿಂದ ರಾಜ್ಯ ಮಟ್ಟದ ಹಾರ್ಡ್ ಟೆನ್ನಿಸ್ ಕ್ರಿಕೆಟ್ ಪಂದ್ಯಾವಳಿ ಶುರುವಾಗಲಿದೆ.
ಈ ಕುರಿತಂತೆ ಪಂದ್ಯಾವಳಿ ಸಂಘಟಕರು ನಗರದ ಮೀಡಿಯಾ ಕ್ಲಬ್ನಲ್ಲಿ ಸುದ್ದಿಗೋಷ್ಟಿ ನಡೆಸಿದ್ರು. ಗವಿಸಿದ್ದೇಶ್ವರ ಜಾತ್ರೆ ಮಹೋತ್ಸವದ ಅಂಗವಾಗಿ 'ಗವಿಶ್ರೀ ಟ್ರೋಫಿ' ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ತಲಾ ಒಂದೊಂದು ತಂಡಗಳು ಸೇರಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಒಟ್ಟು 36 ತಂಡಗಳು ಪಂದ್ಯಾವಳಿಗೆ ಹೆಸರು ನೋಂದಾಯಿಸಿಕೊಂಡಿವೆ.
ಜನವರಿ 5 ರಿಂದ ನಗರದ ತಾಲೂಕು ಕ್ರೀಡಾಂಗಣದಲ್ಲಿ ಪಂದ್ಯಾವಳಿ ಶುರುವಾಗಲಿದೆ. ಪಂದ್ಯಾವಳಿಯ ಪ್ರಥಮ ಬಹುಮಾನ 1 ಲಕ್ಷದ 8 ಸಾವಿರ ರೂಪಾಯಿ ನಗದು ಹಾಗೂ ಟ್ರೋಫಿ, ಎರಡನೇ ಬಹುಮಾನ 50 ಸಾವಿರ ರುಪಾಯಿ ಹಾಗೂ ತೃತೀಯ 15 ಸಾವಿರ ಮತ್ತು ನಾಲ್ಕನೇ ಬಹುಮಾನವಾಗಿ 10 ಸಾವಿರ ರೂಪಾಯಿ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುತ್ತದೆ.
ಪ್ರತಿ ತಂಡಕ್ಕೆ 5,000 ರೂ. ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. ಪಂದ್ಯಾವಳಿಗೆ ಬರುವ ತಂಡಗಳಿಗೆ ಊಟ, ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ. ಬಹುಮಾನಗಳನ್ನು ದಾನಿಗಳು ನೀಡುತ್ತಿದ್ದಾರೆ ಎಂದು ಪಂದ್ಯಾವಳಿ ಕುರಿತು ಆಯೋಜಕರು ಮಾಹಿತಿ ನೀಡಿದರು. ಪಂದ್ಯಾವಳಿಯ ಸಂಘಟಕರಾದ ಬಿ. ಶ್ರವಣಕುಮಾರ್ ಈರಣ್ಣ, ಸಯ್ಯದ್ ಮಹಿಮೂದ್ ಹುಸೇನಿ, ರಜಾಕ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಮದುವೆ ಬಸ್ ಪಲ್ಟಿ: 7 ಜನರ ದಾರುಣ ಸಾವು, ಹಲವರು ಗಂಭೀರ