ETV Bharat / state

ಪ್ರಧಾನಮಂತ್ರಿಯವರ ತಾಕತ್ತು ಇಡೀ ಪ್ರಪಂಚಕ್ಕೆ ಗೊತ್ತು.. ಸಚಿವ ಎಸ್‌ ಟಿ ಸೋಮಶೇಖರ್

ಮುಂದಿನ ದಿನಗಳಲ್ಲಿ ಅವರಿಗೆ ಸ್ಥಾನಮಾನವನ್ನು ನೀಡುವ ಕುರಿತಂತೆ ನೇರವಾಗಿ ವಿಶ್ವನಾಥ್ ಅವರಿಗೆ ಸಿಎಂ ಅವರೇ ಹೇಳಿದ್ದಾರೆ. ಇದನ್ನು ಹೆಚ್‌ ವಿಶ್ವನಾಥ್ ಅವರು ಕೂಡ ಒಪ್ಪಿಕೊಂಡಿದ್ದಾರೆ. ಸಿಎಂ ಯಡಿಯೂರಪ್ಪ ಅವರು ನುಡಿದಂತೆ ನಡೆದಿದ್ದಾರೆ. ಯಾರಿಗೂ ಅನ್ಯಾಯ, ಮೋಸ ಮಾಡುವ ಜಾಯಮಾನ ಅವರದಲ್ಲ..

st-somashekar
ಎಸ್.ಟಿ. ಸೋಮಶೇಖರ್
author img

By

Published : Jun 19, 2020, 8:58 PM IST

ಕೊಪ್ಪಳ : ಸಂಸದ ಡಿ ಕೆ ಸುರೇಶ್ ತಮ್ಮ ಲಿಮಿಟ್ಸ್​ನಲ್ಲಿ ಹಾಗೂ ತಮ್ಮ ತಮ್ಮ ಕ್ಷೇತ್ರದ ಬಗ್ಗೆ ಮಾತನಾಡಲಿ. ಆದರೆ, ಪ್ರಧಾನಮಂತ್ರಿಗಳ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

ಪ್ರಧಾನಮಂತ್ರಿಯವರ ತಾಕತ್ತು ಇಡೀ ಪ್ರಪಂಚಕ್ಕೆ ಗೊತ್ತಿದೆ..

ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಪ್ರಧಾನಮಂತ್ರಿಗಳ ತಾಕತ್ತು ಏನು ಎಂಬುದು ಇಡೀ ಪ್ರಪಂಚಕ್ಕೆ ಗೊತ್ತಿದೆ. ಮುಂದಿನ ದಿನಗಳಲ್ಲಿ ಯಾವ ಸ್ಟೆಪ್ ತೆಗೆದುಕೊಳ್ಳಬೇಕೋ, ಅದನ್ನು ಪ್ರಧಾನಮಂತ್ರಿಗಳು ತೆಗೆದುಕೊಳ್ಳುತ್ತಾರೆ. ಇವರ ಮಾತು ಕೇಳಿ ಚಾಲೆಂಜ್ ಮಾಡಬೇಕಾಗಿಲ್ಲ ಎಂದರು.

ಕೃಷ್ಣ ಬೈರೇಗೌಡರಿಗೆ ಹಿಂದೆ ಗೊತ್ತಿಲ್ಲ, ಮುಂದೆ ಗೊತ್ತಿಲ್ಲ. ಬಿಜೆಪಿಗೆ ಬಂದ ನಮ್ಮ 17 ಜನರಲ್ಲಿ ಈಗಾಗಲೇ ಹತ್ತು ಜನರನ್ನು ಮಂತ್ರಿಗಳನ್ನಾಗಿ ಮಾಡಿದ್ದಾರೆ. ಹೆಚ್ ವಿಶ್ವನಾಥ್ ಅವರನ್ನು ಹೊರತುಪಡಿಸಿ ಎಂಟಿಬಿ ನಾಗರಾಜ್ ಮತ್ತು ಶಂಕರ್ ಅವರಿಗೆ ಎಂಎಲ್ಸಿ ಮಾಡಿದ್ದಾರೆ. ಪ್ರತಾಪ್‌ಗೌಡ ಪಾಟೀಲ್ ಹಾಗೂ ಮುನಿರತ್ನ ಅವರು ಚುನಾವಣೆಗೆ ಹೋಗ್ತಿದ್ದಾರೆ. ವಿಶ್ವನಾಥ್ ಅವರ ಬಗ್ಗೆ ನಾನು, ಬಿಸಿ ಪಾಟೀಲ್ ಹಾಗೂ ಬೈರತಿ ಸೇರಿ ಸಿಎಂ ಅವರನ್ನು ಭೇಟಿ ಮಾಡಿ ಹೇಳಿದ್ದೇವೆ. ಈಗ ಏನೋ ಒಂದು ಸಮಸ್ಯೆಯಾಗಿದೆ ಮುಂದಿನ ದಿನಗಳಲ್ಲಿ ವಿಶ್ವನಾಥ್ ಅವರಿಗೆ ಸ್ಥಾನಮಾನ ಕೊಡ್ತೀವಿ ಎಂದು ಸಿಎಂ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಅವರಿಗೆ ಸ್ಥಾನಮಾನವನ್ನು ನೀಡುವ ಕುರಿತಂತೆ ನೇರವಾಗಿ ವಿಶ್ವನಾಥ್ ಅವರಿಗೆ ಸಿಎಂ ಅವರೇ ಹೇಳಿದ್ದಾರೆ. ಇದನ್ನು ಹೆಚ್‌ ವಿಶ್ವನಾಥ ಅವರು ಕೂಡ ಒಪ್ಪಿಕೊಂಡಿದ್ದಾರೆ. ಸಿಎಂ ಯಡಿಯೂರಪ್ಪ ಅವರು ನುಡಿದಂತೆ ನಡೆದಿದ್ದಾರೆ. ಯಾರಿಗೂ ಅನ್ಯಾಯ, ಮೋಸ ಮಾಡುವ ಜಾಯಮಾನ ಯಡಿಯೂರಪ್ಪ ಅವರದಲ್ಲ ಎಂದರು. ರಾಜ್ಯದ ಎಲ್ಲಾ ಡಿಸಿಸಿ ಬ್ಯಾಂಕ್​ಗಳಲ್ಲಿ ರೈತರಿಗೆ ಸಾಲ ನೀಡಲಾಗುತ್ತಿದೆ. ಸಾಲ ನೀಡುವ ಕುರಿತು ಈಗಾಗಲೇ ಟಾರ್ಗೆಟ್ ಮಾಡಿದ್ದೇವೆ. 14,500 ಕೋಟಿ ರೂಪಾಯಿ ಹೊಸ ಸಾಲ ನೀಡಲು ಚಾಲನೆ ನೀಡಿದ್ದೇವೆ.

21 ಡಿಸಿಸಿ ಬ್ಯಾಂಕ್​ಗಳಲ್ಲಿ, ಅಪೆಕ್ಸ್ ಬ್ಯಾಂಕ್​ಗಳಲ್ಲಿ ಸಾಲ ನೀಡಲು ಚಾಲನೆ ನೀಡಲಾಗಿದೆ. ರಾಯಚೂರು ಡಿಸಿಸಿ ಬ್ಯಾಂಕ್ ಡಿವೈಡ್ ಮಾಡುವ ಕುರಿತು ಇಲ್ಲಿನ ಜನಪ್ರತಿನಿಧಿಗಳು ಗಮನಕ್ಕೆ ತಂದಿದ್ದಾರೆ. ಅನೌಪಚಾರಿಕವಾಗಿ ಈ ಬಗ್ಗೆ ಮಾತನಾಡಿದ್ದೇವೆ. ಮುಂದಿನ ದಿನಗಳಲ್ಲಿ ರಾಯಚೂರು, ಕೊಪ್ಪಳದ ಜನಪ್ರತಿನಿಧಿಗಳ ಹಾಗೂ ನಬಾರ್ಡ್‌ನವರ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.