ಕುಷ್ಟಗಿ(ಕೊಪ್ಪಳ) : ಮಹಿಳೆಯೊಬ್ಬಳಿಗೆ ಹಾವು ಕಚ್ಚಿ ಸಾವನ್ನಪ್ಪಿದ್ದಾಳೆ. ಆ ಹಾವನ್ನು ಹಿಡಿದು ಕುಟುಂಬಸ್ಥರು ಸಾಯಿಸಿದ್ದಾರೆ. ಆದ್ರೆ, ಆ ಹಾವಿನ ಮರಿಗಳು ಆ ಮನೆಯ ಕುಟುಂಬಸ್ಥರ ಕೆಲವರಿಗೆ ಕಚ್ಚಿ ಸೇಡು ತೀರಿಸಿಕೊಂಡಂತಿದೆ.
ಏನಿದು ಘಟನೆ : ಕಳೆದ ಸೋಮವಾರ ತಡರಾತ್ರಿ ನಿರ್ಮಲಾ ಪರಶುರಾಮ ಮಡಿಕ್ಕೇರಿಗೆ ಮನೆಯಲ್ಲಿ ಹಾವು ಕಚ್ಚಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ನಿರ್ಮಾಲಾಗೆ ಕಚ್ಚಿದ ಹಾವನ್ನು ಹುಡುಕಿ ಕುಟುಂಬಸ್ಥರು ಕೊಂದು ಹಾಕಿದ್ದರು.
ಅದೇ ಮನೆಯಲ್ಲಿ ಮಂಗಳವಾರ ರಾತ್ರಿ ಮೃತಳ ಮೈದುನ ಬಸವರಾಜ ಬೀರಪ್ಪ ಮಡಿಕ್ಕೇರಿ, ಮೃತಳ ಸಂಬಂಧಿ ಕಲಾಲಬಂಡಿ ಗ್ರಾಮದಿಂದ ಬಂದಿದ್ದ ಮುತ್ತು ಶರಣಪ್ಪ ಮೇಟಿಗೆ ಹಾವಿನ ಮರಿಗಳು ಕಚ್ಚಿವೆ. ಹಾವಿನ ಮರಿಗಳು ಕಚ್ಚಿದ್ದರಿಂದ ಇಬ್ಬರೂ ಅಸ್ವಸ್ಥಗೊಂಡಿದ್ದು, ಹನಮಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಸಿಪಿಐ ನಿಂಗಪ್ಲ ರುದ್ರಪ್ಪಗೋಳ, ಪಿಎಸ್‌ಐ ಅಶೋಕ್ ಬೇವೂರು ಸದರಿ ಮನೆಯಲ್ಲಿ ಉಳಿದ ಸದಸ್ಯರನ್ನು ಬೇರೆ ಮನೆಗೆ ಸ್ಥಳಾಂತರಿಸಲು ಕ್ರಮಕೈಗೊಂಡರು. ಮನೆಯಲ್ಲಿ ಹಾವಿನ ಮರಿಗಳಿರುವ ಬಗ್ಗೆ ಶಂಕಿಸಲಾಗಿದ್ದು, ಹಾವಾಡಿಗರನ್ನು ಕರೆಯಿಸಿ ಹಾವಿನ ಮರಿಗಳನ್ನು ಪತ್ತೆ ಹಚ್ಚಲು ಕ್ರಮವಹಿಸಲಾಗಿದೆ. ಈ ಕುರಿತು ಪ್ರಕರಣ ಹನುಮಸಾಗರ ಠಾಣೆಯಲ್ಲಿ ದಾಖಲಾಗಿದ್ದು, ಈ ಘಟನೆಯಿಂದಾಗಿ ಸೇಬಿನಕಟ್ಟಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಓದಿ: ಮದ್ಯದ ಅಮಲಿನಲ್ಲಿ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದವನಿಗೆ ಬಿತ್ತು ಭಾರೀ ದಂಡ!