ಗಂಗಾವತಿ: ತಾಲೂಕಿನ ಧಾರ್ಮಿಕ ಹಾಗೂ ಐತಿಹಾಸಿಕ ತಾಣವಾದ ಅಂಜನಾದ್ರಿ ಬೆಟ್ಟದ ಆಂಜನೇಯ ದೇಗುಲದಲ್ಲಿ ಭಕ್ತರು ಕಾಣಿಕೆ ಸಲ್ಲಿಸಿದ್ದ ಹುಂಡಿಯನ್ನು ಶನಿವಾರ ಕಂದಾಯ ಅಧಿಕಾರಿಗಳು ತೆಗೆದರು.
ಹುಂಡಿಯಲ್ಲಿ ಸಿಂಗಾಪುರದ ನಾಣ್ಯ ಪತ್ತೆಯಾಗಿದೆ. ಕೇವಲ 25 ದಿನಗಳ ಹಿಂದಷ್ಟೆ ಕಾಣಿಕೆ ಪೆಟ್ಟಿಗೆ ತೆರೆಯಲಾಗಿತ್ತು. ದಾಖಲೆಯ ₹ 9.26 ಲಕ್ಷ ಮೊತ್ತದ ಹಣ ಸಂಗ್ರಹವಾಗಿತ್ತು.
ಡಿಸೆಂಬರ್ 9ರಂದು ಹನುಮಮಾಲೆ ಇರುವ ಕಾರಣಕ್ಕೆ ಹುಂಡಿ ತೆರೆಯಲಾಗಿದೆ. ಹಣದ ಎಣಿಕೆ ಕಾರ್ಯ ನಡೆದಿದ್ದು, ಸಂಜೆ ವೇಳೆಗೆ ಸಂಗ್ರಹದ ಮೊತ್ತ ಗೊತ್ತಾಗಲಿದೆ ಎಂದು ತಹಶೀಲ್ದಾರ್ ಚಂದ್ರಕಾಂತ್ ಹೇಳಿದರು. ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಇತರರು ಈ ವೇಳೆ ಇದ್ದರು.